ಏ. 10: ಬೆಳ್ಳಾರೆಯಲ್ಲಿ ಪ್ರಸಾದ್ ಟೆಕ್ಸ್‌ಟೈಲ್ಸ್ ಸ್ಥಳಾಂತರಗೊಂಡು ಶುಭಾರಂಭ

Advt_Headding_Middle
Advt_Headding_Middle

 

47ವರ್ಷಗಳಿಂದ ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ದಿ. ಶ್ಯಾಮ ಜೋಶಿಯವರಿಂದ ಪ್ರಾರಂಭವಾಗಿ ಶ್ಯಾಮ ಜೋಶಿಯವರ ಕಿರಿಯ ಪುತ್ರ ನರಸಿಂಹ ಜೋಶಿಯವರು ನಡೆಸಿಕೊಂಡುಬರುತ್ತಿರುವ ಜೋಶಿ ಬಳಗದ ಸಂಸ್ಥೆ ಪ್ರಸಾದ್ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಏ. 10ರಂದು ಶುಭಾರಂಭಗೊಂಡಿತು. ಜೋಶಿ ಮನೆತನದ ಕುಲ ಪುರೋಹಿತರಾದ ವೇ.ಮೂ. ಮಿತ್ತೂರು ಸದಾಶಿವ ಭಟ್‌ರವರ ನೇತೃತ್ವದಲ್ಲಿ ಏ. 9ರಂದು ರಾತ್ರಿ ವಾಸ್ತು ಹೋಮ ಸೇರಿದಂತೆ ವಿವಿಧ ವೈದಿಕ ಕಾರ್ಯಗಳು ನಡೆದು, ಏ. ೧೦ರಂದು ಪ್ರವೇಶೋತ್ಸವ ನಡೆಯಿತು. ವೇ.ಮೂ. ಮಿತ್ತೂರು ಸದಾಶಿವ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ನರಸಿಂಹ ಜೋಶಿಯವರ ತಾಯಿ ಶ್ರೀಮತಿ ಸಾವಿತ್ರಿ ಅಮ್ಮ, ಸಹೋದರರಾದ ಪ್ರಸಾದ್ ಫ್ಯೂಯೆಲ್ಸ್‌ನ ಮಾಲಕ ಜಯಪ್ರಸಾದ್ ಜೋಶಿ ಮತ್ತು ಶ್ರೀಮತಿ ಸುಜಯ ಪ್ರಸಾದ್ ಜೋಶಿ, ಪ್ರಸಾದ್ ಹಾರ್ಡ್‌ವೇರ್‍ಸ್‌ನ ಮಾಲಕರಾದ ಸುಬ್ರಹ್ಮಣ್ಯ ಜೋಶಿ ಮತ್ತು ಶ್ರೀಮತಿ ಶ್ಯಾಮಲ ಎಸ್.ಜೋಶಿ, ನರಸಿಂಹ ಜೋಶಿಯವರ ಪತ್ನಿ ಶ್ರೀಮತಿ ವಿಜಯ ಎನ್. ಜೋಶಿ, ಪುತ್ರರಾದ ಅಜೇಶಯ ಶ್ಯಾಮ, ಅಕ್ಷಯ್, ಸಹೋದರಿ ಶ್ರೀಮತಿ ರಾಜೇಶ್ವರಿ ಡಾ. ರಾಮಚಂದ್ರ ಭಟ್ ದೇವಸ್ಯ, ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಮೀನಾ ಎಂಟರ್‌ಪ್ರೈಸಸ್‌ನ ಮಾಲಕರಾದ ವಿ. ಗಣೇಶ್ ಭಟ್, ಕೋಡಿಬೈಲ್ ಏಜೆನ್ಸೀಸ್‌ನ ಮಾಲಕರಾದ ಸತ್ಯನಾರಾಯಣ ಕೋಡಿಬೈಲ್, ಅತಿಕ್ಕರಮಜಲು ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ. ಇಸಾಕ್ ಸಾಹೇಬ್ ನಿವೃತ್ತ ಯೋಧ ರವೀಂದ್ರ ಗೌಡ ರಾಮಕುಮೇರಿ, ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷರುಗಳಾದ ರಾಜೇಶ್ ಶ್ಯಾನುಭಾಗ್ ಮತ್ತು ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಎ.ಕೆ. ಮಣಿಯಾಣಿ, ಪೂರ್ವಾಧ್ಯಕ್ಷ ಶ್ಯಾಮಸುಂದರ್ ರೈ, ಮಾಜಿ ಜಿ.ಪಂ. ಸದಸ್ಯ ಚಂದ್ರಶೇಖರ ಕಾಮತ್, ಜೋಶಿಯವರ ಕುಟುಂಬಸ್ಥರು, ಸಮೂಹ ಸಂಸ್ಥೆಗಳ ಸಿಬ್ಬಂದಿ ವರ್ಗದವರು, ಸಂಬಂಧಿಕರು ಸೇರಿದಂತೆ ನೂರಾರು ಮಂದಿ ಆಗಮಿಸಿ ಶುಭಾಶಯ ಹೇಳಿದರು. ಸ್ಥಳಾಂತರಗೊಂಡು ಶುಭಾರಂಭಗೊಳ್ಳುತ್ತಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಖರೀದಿಯ ಮೇಲೆ ೧೦% ಡಿಸ್ಕೌಂಟ್ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.