Breaking News

ತೊಡಿಕಾನ ದೇವಸ್ಥಾನದಲ್ಲಿ ಕಾಯರ್ತೋಡಿ ಬಳಗದವರಿಂದ ಕರಸೇವೆ

Advt_Headding_Middle
Advt_Headding_Middle


ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎ.13 ರಿಂದ ಎ.19ರ ವರೆಗೆ ನಡೆಯುವ ಜಾತ್ರೋತ್ಸವದ ಪ್ರಯುಕ್ತ ಕಾಯರ್ತೋಡಿ ರಕ್ತೇಶ್ವರಿ ಸೇವಾ ಸಮಿತಿ ಶ್ರೀನಿಧಿ ಮಹಿಳಾ ಮಂಡಳ ಮಿತ್ರಬಳಗ ಕಾಯರ್ತೋಡಿ ಮಹಮ್ಮಾಯಿ ಸೇವಾ ಸಮಿತಿ ನಾವೂರು ಮಜಲು ವರದಾಯಿನಿ ವ್ಯಾಘ್ರಚಾಮುಂಡಿ ದೇವಸ್ಥಾನದ ಸದಸ್ಯರುಗಳಿಂದ ತೊಡಿಕಾನ ದೇವಸ್ಥಾನದಲ್ಲಿ ಎ.12 ರಂದು ರಾತ್ರಿ ದೇವಸ್ಥಾನದ ಆವರಣದ ಸ್ವಚ್ಛತೆ, ತಳಿರು ತೋರಣಗಳಿಂದ ಅಲಂಕರಿಸುವುದು ಮುಂತಾದ ಕೆಲಸಗಳನ್ನು ಶ್ರಮದಾನದ ಮೂಲಕ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಸದಸ್ಯರಾದ ಮಾಲತಿ ಬೋಜಪ್ಪ, ತಿಮ್ಮಯ್ಯ ಮಿತ್ತಡ್ಕ, ಕೆ.ಕೆ.ಬಾಲಕೃಷ್ಣ, ದೇವಸ್ಥಾನದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ, ಜನಾರ್ದನ ಟೈಲರ್ ಮತ್ತು ಸಿಬ್ಬಂಧಿ ವರ್ಗ ಉಪಸ್ಥಿತರುದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.