Breaking News

ಗಾಂಧಿನಗರದಲ್ಲಿ ಕಾಂಕ್ರಿಟ್ ರಸ್ತೆ ಕಟ್ಟಿಂಗ್ : ಊರವರಿಂದ ವಿರೋಧ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರ ಶಾಲೆ ಎದುರು ಕಾಂಕ್ರಿಟ್ ರಸ್ತೆಯನ್ನು ಟೆಲಿಫೋನ್ ಕಂಪೆನಿಯವರು ಕೇಬಲ್ ಅಳವಡಿಸಲು ಅಗೆಯುತ್ತಿದ್ದರು ಇದಕ್ಕೆ ಊರವರಿಂದ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗಾಂಧಿನರ ಶಾಲೆ ಎದುರಿನ ಕಾಂಕ್ರಿಟ್ ರಸ್ತೆಯನ್ನು ಅಗೆದು ಗುಂಡಿಮಾಡುತ್ತಿರುವ ಸಂದರ್ಭದಲ್ಲಿ ಸುಳ್ಯ ನಗರ ಎಸ್.ಡಿ.ಪಿ.ಐ ಅಧ್ಯಕ್ಷ ಅಬ್ದುಲ್ ಕಲಾಂ ಮತ್ತು ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ನೆತೃತ್ವದಲ್ಲಿ ಊರವರಿಂದ ವಿರೋಧ ವ್ಯಕ್ತಪಡಿಸಿ ಕೆಲಸವನ್ನು ಸ್ಥಗಿತಗೊಳಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಸುಳ್ಯ ಪೊಲೀಸರು, ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ಸಂಪರ್ಕಿಸಿ ಮಾತುಕತೆ ನಡೆಸಿದರು. ಬಳಿಕ ನಗರ ಪಂಚಾಯತ್ ಇಂಜಿನಿಯರ್ ರಸ್ತೆ ಕಟ್ಟಿಂಗ್ ಅನುಮತಿ ಪಡೆದು ಕಾಮಗಾರಿ ಮಾಡುತ್ತಿದ್ದಾರೆ ಎಂದು ತಿಳಿಸಿದರೂ ಅದಕ್ಕೆ ಒಪ್ಪದ ಸ್ಥಳೀಯರು ಕಾಮಗಾರಿ ನಗರ ಪಂಚಾಯತ್‌ನಿಂದ ಪಡೆದ ಪರ್ಮಿಶನ್ ಕೋಪಿ ತನ್ನಿ ನಂತರ ಕೆಲಸ ಮಾಡಿ ಎಂದು ಒತ್ತಾಯಿಸಿದರು. ಬಳಿಕ ಪೊಲೀಸರು ತೋಡಿದ ಗುಂಡಿಯನ್ನು ಮುಚ್ಚಿಸಿದರು. ನಾಳೆ ಪರ್ಮಿಶನ್ ಕೋಪಿಯನ್ನು ತಂದು ಕಾಮಗಾರಿ ಆರಂಭಿಸಿ ಎಂದು ಅವರಿಗೆ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.