ಎ.22 ರಂದು ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ

Advt_Headding_Middle
Advt_Headding_Middle


ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ ಪ್ರಥಮ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಎ.22 ರಂದು ವೇದಮೂರ್ತಿ ಶ್ರೀ ಹರಿ ಎಳಚಿತ್ತಾಯರ ಮಾರ್ಗದರ್ಶನದಲ್ಲಿ ನಡೆಯಲಿರುವುದು.
ಪೂರ್ವಾಹ್ನ ಗಂಟೆ 9.00 ರಿಂದ ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಮಧ್ಯಾಹ್ನ ಅಲಂಕಾರ ಮಹಾಪೂಜೆಯಾಗಿ ಅನ್ನಸಂತರ್ಪಣೆಯಾಗಲಿದೆ. ಸಂಜೆ 5.00 ಗಂಟೆಗೆ ಆಶ್ಲೇಷಾ ಬಲಿ ಪೂಜೆಯಾಗಿ ರಂಗಪೂಜೆ ನೆರವೇರಲಿರುವುದು. ಬಳಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆಯಾಗಲಿರುವುದು. ಸಂಜೆ 4.00 ಗಂಟೆಯಿಂದ ಭಜನಾ ಕಾರ್ಯಕ್ರಮ, ಗಂಟೆ 6.00 ರಿಂದ ಕುಂಟಾರು ವಾಸುದೇವ ತಂತ್ರಿ ಮತ್ತು ಬಳಗದವರಿಂದ ಭಕ್ತಿಗಾನ, ರಾತ್ರಿ 7.30 ಕ್ಕೆ ಧಾರ್ಮಿಕ ಸಭೆಯು ಡಾ.ಕೆ.ವಿ.ಚಿದಾನಂದ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಉಪ್ಪಳ ರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಾ.ಕಿರಣ್ ಕುಮಾರ್, ಕೃಷ್ಣ ಕಾಮತ್ ಅರಂಬೂರು, ಶ್ರೀ ಕೃಷ್ಣ ಸೋಮಯಾಗಿ, ಶ್ರೀಧರ ಭಾಗವತ ಹರಿಹರ, ಸುಂದರ ಸರಳಾಯ, ಶ್ರೀಮತಿ ಸುಮಾ ಸುಬ್ಬರಾವ್ ರವರು ಉಪಸ್ಥಿತರಿರುತ್ತಾರೆ. ಬಳಿಕ ಶಿಕ್ಷಕರ ಯಕ್ಷಗಾನ ಒಕ್ಕೂಟದವರಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನವಾಗಲಿರುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ತಿಳಿಸಿದರು. ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳಿಕೃಷ್ಣ ಎಂ.ಆರ್, ಟ್ರಸ್ಟಿನ ಕಾರ್ಯದರ್ಶಿ ಗಿರೀಶ್ ಕೇಕುಣ್ಣಾಯ, ಟ್ರಸ್ಟಿಗಳಾದ ರಾಮ್ ಕುಮಾರ್, ಅಖಿಲ್ ಸೋಮಯಾಗಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.