ಎ.21ರಿಂದ ಒಂದು ತಿಂಗಳ ಕಾಲ ಸುಳ್ಯದ ಶ್ರೀ ಕೇಶವಕೃಪಾದಲ್ಲಿ ವೇದ-ಯೋಗ-ಕಲಾ ಅಂತರ್‌ರಾಜ್ಯ ಮಟ್ಟದ ಶಿಬಿರ

Advt_Headding_Middle
Advt_Headding_Middle


ಸುಳ್ಯ ಹಳೆಗೇಟು-ವಿದ್ಯಾನಗರದಲ್ಲಿ ಪುರೋಹಿತ ನಾಗರಾಜ ಭಟ್ಟರ ನೇತೃತ್ವದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ 19ನೇ ವರ್ಷದ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರವು ಎ.21ರಿಂದ ಆರಂಭಗೊಂಡು ಒಂದು ತಿಂಗಳುಗಳ ಕಾಲ ನಡೆಯಲಿದೆ. ಮೇ.21ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಎ.13ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪುರೋಹಿತ ನಾಗರಾಜ ಭಟ್ಟರು ಒಂದು ತಿಂಗಳುಗಳ ಕಾಲ ನಡೆಯುವ ಶಿಬಿರದ ಕುರಿತು ವಿವರ ನೀಡಿದರು. “ಪ್ರತಿಷ್ಠಾನ ಆರಂಭದಲ್ಲಿ ವೇದ ತರಗತಿಯ ಉದ್ದೇಶವನ್ನಷ್ಟೆ ಹೊಂದಿತ್ತು. ಆ ಬಳಿಕ ವಿವಿಧ ಚಟುವಟಿಕೆಗಳ ಮೂಲಕ ತನ್ನ ಪರಿಧಿಯನ್ನೇ ವಿಸ್ತಿರಿಸಿತು. ಯೋಗದ ಜತೆಗೆ, ಕಲಾ ಪ್ರಕಾರಗಳಾದ ಯಕ್ಷಗಾನ, ಕಂಸಾಳೆ, ಜಾದೂ, ಭಜನೆ, ಸಂಗೀತ, ಪೇಪರ್ ಕಟ್ಟಿಂಗ್, ಮಿಮಿಕ್ರಿ ಮೊದಲಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಹಿಂದೂ ಧರ್ಮದ ನಂಬಿಕೆಗಳು ಮತ್ತು ಆಚರಣೆಗಳ ಹಿಂದಿರುವ ವೈಜ್ಞಾನಿಕ ಕಾರಣಗಳು, ಭಗವದ್ಗೀತೆ, ಲಲಿತಾಸಹಸ್ರನಾಮ, ವಿಷ್ಣು ಸಹಸ್ರನಾಮ, ಆದರ್ಶ ಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಫುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ, ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಸುಮಾರು ೩೫ ದಿನಗಳ ಕಾಲ ರಾಜ್ಯ ಹಾಗೂ ಹೊರ ರಾಜ್ಯದ ಆಯ್ಕೆಯಾದ ೧೨೦ ಶಿಬಿರಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳು, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪರತಿಷ್ಠಾನದ ಆಶ್ರಯದಲ್ಲಿ 19 ವರ್ಷದ ವೇದ -ಯೋಗ-ಕಲಾ ಶಿಬಿರವು ಉಚಿತವಾಗಿ ನಡೆಯಲಿದೆ ಎಂದರು.
ವೇದ ಅಧ್ಯಾಪಕರಾದ ಸುದರ್ಶನ ಭಟ್ ಮಾತನಾಡಿ, “ಎ.೨೧ರಂದು ಶಿಬಿರದ ಉದ್ಘಾಟನೆಯನ್ನು ಶ್ರೀ ಕೇಶವಕಿರಣ ಛಾತ್ರಾ ನಿವಾಸ ನಿರ್ಮಾಣ ಸಮಿತಿಯ ಅಧ್ಯಕ್ಷ ಶಂಕರ ಭಟ್ ಪುತ್ತೂರು ನೆರವೇರಿಸಲಿದ್ದಾರೆ. ಶಿಕ್ಷಣ ಇಲಾಖೆಯ ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಎಂ.ಎಸ್.ನಾಗರಾಜ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಗರದ ಗಜಾನನ ಸಂಸ್ಕೃತ ಪಾಠಶಾಲಾದ ಉಪನ್ಯಾಸಕ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟ ದಿಕ್ಸೂಚಿ ಉಪನ್ಯಾಸ ನೀಡಲಿದ್ದು, ನಿವೃತ್ತ ಶಿಕ್ಷಕಿ ಶ್ರೀಮತಿ ಗಂಗಮ್ಮ ಕೋಲ್ಚಾರ್ ಮುಖ್ಯ ಅತಿಥಿಗಳಾಗಿರುತ್ತಾರೆ. ಕೇಶವ ಕೃಪಾದ ಗೌರವಾಧ್ಯಕ್ಷ ಗೊಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿರುವರು ಎಂದು ಅವರು ಹೇಳಿದರು. ಶಂಕರ ಭಟ್ ಪುತ್ತೂರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.