Breaking News

ಡಾ| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಎ.20ರಂದು ಬೆಳ್ಳಾರೆಯಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸುಳ್ಯ ತಾ. ಸಮಿತಿ, ಪುತ್ತೂರು ತಾ.ಸಮಿತಿ, ಕಡಬ ತಾ.ಸಮಿತಿ ಮತ್ತು ದ.ಕ.ಜಿಲ್ಲಾ ಸಮಿತಿ ಆಶ್ರಯದಲ್ಲಿ ಡಾ| ಬಿ.ಆರ್. ಅಂಬೇಡ್ಕರ್‌ರವರ 128 ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ಸುಳ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ 13ನೇ ವರ್ಷದ ಮಹಿಳಾ ಮತ್ತು ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ದ.ಸಂ.ಸಮಿತಿಯ ಜಿಲ್ಲಾಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಹಾಗೂ ತಾಲೂಕು ಸಂಚಾಲಕ ಅಚ್ಚುತ ಮಲ್ಕಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎ.13ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಬೆಳಗ್ಗೆ ಉದ್ಘಾಟನಾ ಸಮಾರಂಭದ ಬಳಿಕ ಮಹಿಳಾ ವಿಭಾಗದ ಕಬಡ್ಡಿ ಪಂದ್ಯಾಟಗಳು ನಡೆಯುವುದು. ಒಟ್ಟು 6 ತಂಡಗಳು ಭಾಗವಹಿಸಲಿದೆ ಎಂದು ಹೇಳಿದರು. ಸಂಜೆ ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಅದಕ್ಕಿಂತ ಮೊದಲು ಸಭಾ ಕಾರ್ಯಕ್ರಮ ನಡೆಯುವುದು. ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಬಾಬು ಭಂಡಾರಿ, ಕ್ರೀಡಾಪಟು ಸುನಂದ ರೈ, ಇಂಜಿನಿಯರ್ ಮಹಮ್ಮದ್ ಬೆಳ್ಳಾರೆ, ಸಮಾಜ ಸೇವೆಯಲ್ಲಿರುವ ಹನೀಫ್ ಸಾಹೇಬ್ ಪಾಜಪಳ್ಳ, ಚಲನಚಿತ್ರ ನಟ ಮೋಹನ್ ಶೇಣಿ, ಸಂಜೀವ ಮಣಿಯಾಣಿ ನಿವೃತ್ತ ಡ್ರೈವರ್ ಇವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು. ಸಂಘಟನೆಯ ಮುಖಂಡರು, ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.