Breaking News

ದ.ಕ.ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ

Advt_Headding_Middle
Advt_Headding_Middle


ದ.ಕ ಲೋಕಸಭಾ ಕ್ಷೇತ್ರದ ಸಮ್ಮಿಶ್ರ ಅಭ್ಯರ್ಥಿ ಮಿಥುನ್ ರೈ ಪರ ಮತ ಯಾಚನೆ ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ನಡೆಯಿತು. ತೊಡಿಕಾನ, ಅಡ್ಯಡ್ಕದಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದರು. ನಂತರ ಅರಂತೋಡು ಪೇಟೆಯಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎಮ್.ವೆಂಕಪ್ಪ ಗೌಡ, ಜೆ.ಡಿ.ಎಸ್ ರಾಜ್ಯ ಉಪಾಧ್ಯಕ್ಷ ಎಮ್.ಬಿ.ಸದಾಶಿವ, ಜಾಕೆ ಮಾಧವ ಗೌಡ, ಕೆ.ಪಿ.ಸಿ.ಸಿ ಸದಸ್ಯ ಡಾ.ರಘ, ಮಾಧವ ಗೌಡ ಕಾಮಧೇನು, ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಂ ಭಟ್, ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಉಸ್ತುವಾರಿ ಕೆ.ಎಮ್ ಮುಸ್ತಫಾ, ಅರಂತೋಡು ಗ್ರಾ.ಪಂ ಸದಸ್ಯ ರವಿಚಂದ್ರ, ತೊಡಿಕಾನ ವ್ಯವಸ್ಥಾಪನಾ ಅಧ್ಯಕ್ಷ ಕೇಶವ ಕೊಳಲುಮೂಲೆ, ಕೇಶವ ಪ್ರಸಾದ್ ತೊಡಿಕಾನ, ಅರಂತೋಡು ಗ್ರಾ.ಪಂ ಮಾಜಿ ಸದಸ್ಯೆ ಯೋಗಿಶ್ವರಿ ಅಡ್ಯಡ್ಕ, ನಾಗಪ್ಪ ಬಾಳಕಜೆ, ಗುರುಪ್ರಸಾದ್ ನಾರ್ಕೋಡು, ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು, ತಿಮ್ಮಯ್ಯಮೆತ್ತಡ್ಕ, ತೀರ್ಥರಾಮ ಪರ್ನೋಜಿ, ಅರಂತೋಡು ಕಾಂಗ್ರೆಸ್ ವಲಯ ಅಧ್ಯಕ್ಷ ಜನಾರ್ದನ ಅಡ್ಕಬಳೆ, ನಿತ್ಯಾನಂದ ಕುಕ್ಕುಂಬಳ, ಇದ್ದೀನ್ ಕುಂಞ, ಶಿವರಾಮ ಟೈಲರ್, ಗಣೇಶ್ ಅಡ್ಯಡ್ಕ, ಕಾಂಗ್ರೆಸ್‌ ಮತ್ತು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.