ಎಡಮಂಗಲ : ಕೊರಗಜ್ಜ ದೈವದ ಪ್ರತಿಷ್ಠಾಪನೆ ಮತ್ತು ನೇಮೋತ್ಸವ

Advt_Headding_Middle
Advt_Headding_Middle


ಎಡಮಂಗಲ ಗ್ರಾಮದ ನೂಜಾಡಿ ಬೈರ ಮುಗೇರ ಮತ್ತು ಮನೆಯವರು ಹಾಗೂ ಹತ್ತು ಸಮಸ್ತರ ನೆರವಿನೊಂದಿಗೆ ನರ್ಮಿಸಿದ ಕೊರಗಜ್ಜ ದೈವದ ಪ್ರತಿಷ್ಠಾಪನೆ ಮತ್ತು ನೇಮೋತ್ಸವವು ಎ.12ರಂದು ಶುಕ್ರವಾರ ನೂಜಾಡಿ ಬೈರ ಮುಗೇರರ ಮನೆಯಲ್ಲಿ(ವಠಾರ) ನಡೆಯಿತು.
ದೈವಜ್ಞ ಕಿಲೊಂಗೋಡಿ ಜ್ಯೋತಿಷಿ ಪ್ರದೀಪ್ ಕುಮಾರ್ ರವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಪ್ರಶಾಂತ್ ಭಟ್ ಕಟ್ಟತ್ತಾರುರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಪಂಚಗವ್ಯ ಸ್ಥಳ ಶುದ್ಧೀಕರಣ, 12 ಕಾಯಿ ಗಣಪತಿ ಹವನ, ಪ್ರತಿಷ್ಠಾಪನೆ ಹೋಮ, ನವಕಲಶ ಪೂಜೆ ನಡೆದು ಮದ್ಯಾಹ್ನ ಕೊರಗಜ್ಜ ದೈವದ ಪ್ರತಿಷ್ಠಾಪನೆ, ಕೊರಗಜ್ಜ, ಪಂಜುರ್ಲಿ ಧರ್ಮದೈವ, ಮಂತ್ರವಾದಿ ಗುಳಿಗ, ಕಲ್ಲುರ್ಟಿ ದೈವಗಳಿಗೆ ತಂಬಿಲೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಂಡಾರ ತೆಗೆದು ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಭೈರ ಮುಗೇರ ಕುಟುಂಬಸ್ಥರು, ಊರವರು, ಪರವೂರಿನವರು, ಹಿತೈಶಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.