Breaking News

ಮುರುಳ್ಯದಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ

Advt_Headding_Middle
Advt_Headding_Middle


ಮುರುಳ್ಯ ಗ್ರಾಮದ ಹುದೇರಿ ಎಂಬಲ್ಲಿ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.12 ರಂದು ನಡೆದಿದೆ.
ಹುದೇರಿ ದಿ.ಅಣ್ಣಪ್ಪ ಗೌಡ ಎಂಬವರ ಪುತ್ರ ವೆಂಕಪ್ಪ ಎಂಬವರು ಮನೆಯಲ್ಲಿ ವಿಷ ಸೇವಿಸಿದ್ದು ಅಸ್ವಸ್ಥಗೊಂಡ ಇವರನ್ನು ಕೂಡಲೆ ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆ ಇವರು ಮೃತಪಟ್ಟಿದ್ದರೆನ್ನಲಾಗಿದೆ.
ಇವರಿಗೆ 33 ವರ್ಷ ಪ್ರಾಯವಾಗಿದ್ದು ಆರೋಗ್ಯದ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರು ಸಹೋದರರನ್ನು,  ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.