ಸುಬ್ರಹ್ಮಣ್ಯ ಪಿ.ಯು.ಸಿ : ಎಸ್.ಎಸ್.ಪಿ.ಯು. ಕಾಲೇಜಿಗೆ 88% ಫಲಿತಾಂಶ

Advt_Headding_Middle
Advt_Headding_Middle

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ಪಿ.ಯು.ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಒಟ್ಟು 358 ವಿದ್ಯಾರ್ಥಿಗಳಲ್ಲಿ 314 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 208 ಮಕ್ಕಳು ಪ್ರಥಮ ಶ್ರೇಣಿಯಲ್ಲಿ, 48 ದ್ವಿತೀಯ ಶ್ರೇಣಿ, 26 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಕಾಲೇಜಿಗೆ ಒಟ್ಟು 88% ಫಲಿತಾಂಶ ಲಭಿಸಿದೆ. ಎಂದು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ ತಿಳಿಸಿದ್ದಾರೆ.
ವಾಣಿಜ್ಯ ಇತಿಹಾಸ ವಿಭಾಗ:99%
ವಾಣಿಜ್ಯ ವಿಭಾಗದಲ್ಲಿ ಒಟ್ಟು 86  ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೮೫ ವಿದ್ಯಾರ್ಥಿಗಳು ತೇರ್ಗಡೆಗೊಂಡು 99ಶೇ.ಫಲಿತಾಂಶ ಬಂದಿರುತ್ತದೆ. ೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಪ್ರಥಮ ದರ್ಜೆಯಲ್ಲಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ದೀಪಾ ಆರ್.ಎಸ್(540), ಮಾನಸ.ಎ(534), ಪವಿತ್ರಾ.ಕೆ(516), ಹಂಸನಂದಿನಿ(510), ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಗಣಕ ವಿಜ್ಞಾನ:96%
ಗಣಕ ವಿಜ್ಞಾನ ವಿಭಾಗದಲ್ಲಿ 90 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 86 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 96% ಶೇ. ಫಲಿತಾಂಶ ಬಂದಿರುತ್ತದೆ. ಇದರಲ್ಲಿ 20 ವಿಶಿಷ್ಠ ಶ್ರೇಣಿ ಲಭ್ಯವಾಗಿದೆ. ರಮ್ಯಾ.ಎ.ಎಸ್(578), ವಿಶ್ವಾಸ್ ರಾವ್(572), ಜೀವಿತಾ.ಪಿ(565), ಪ್ರತೀಕ್ಷಾ.ಕೆ(560), ಜೀವನ್.ಕೆ(555), ಭೂಮಿಕಾ.ಎಸ್.ಎ(551), ನಿತೀನ್ ಕುಮಾರ್.ಎಂ(544), ಶ್ರೇಯಾ ಕೆ.ಎಸ್(544), ಸನತ್.ಎ(543), ಕೀರ್ತನ್.ಪಿ(542), ಶಿಲ್ಪಾ ಕೆ.ಎನ್(542), ಜೀವನ್ ಬಿ.ವೈ(541),ಶರಣ್ಯಾ.ಕೆ(535), ಸಂಧ್ಯಾ.ಎಚ್(535), ಶ್ರೀರಕ್ಷಾ.ಬಿ(533), ಪ್ರಸನ್ನ ಕೆ.ಎಚ್(533), ಉಮಾವತಿ ವಿ.ಜೆ(526),ನಮಿತಾ.ಬಿ(518),ದೀಪಾ.ಎ(517), ಶ್ರೇಯಾ ಕೆ.ಎಸ್(511) ವಿಶಿಷ್ಠ ಶ್ರೇಣಿ ಪಡೆದರು.
ವಿಜ್ಞಾನ ವಿಭಾಗ:63%
ವಿಜ್ಞಾನ ವಿಭಾಗದಲ್ಲಿ ಒಟ್ಟು 92 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ ಒಟ್ಟು 58 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 63ಶೇ. ಫಲಿತಾಂಶ ಬಂದಿರುತ್ತದೆ. 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಇದರಲ್ಲಿ ಯೋಗಿತಾ.ಕೆ(562), ಭಾಗೀರಥಿ(೫೫೪), ಗಂಗಮ್ಮ ಐ. (528),ಪ್ರಜ್ಞೇಶ್(527), ನಮೃತಾ ಕೆ.ಎಚ್.(513), ತೀಕ್ಷಣಿ(513) ಡಿಸ್ಟಿಂಕ್ಷನ್ ಪಡೆದರು.
ಕಲಾ ಎ ವಿಭಾಗ: 96%
ಕಲಾ ಎ ವಿಭಾಗದಲ್ಲಿ ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 44 ವಿದ್ಯಾರ್ಥಿಗಳು ತೇರ್ಗಡೆಗೊಂಡು, 96% ಶೇ. ಫಲಿತಾಂಶ ಬಂದಿರುತ್ತದೆ. ಇವರಲ್ಲಿ 2 ವಿಶಿಷ್ಠ ಶ್ರೇಣಿ ಲಭಿಸಿದೆ. ಜಯಪ್ರಕಾಶ ವಿ.ಡಿ( 540) ಮತ್ತು ರಮ್ಯಾ.ಟಿ(513) ವಿಶಿಷ್ಠ ಶ್ರೇಣಿ ಗಳಿಸಿದ್ದಾರೆ.
ಕಲಾ ಬಿ ವಿಭಾಗ: 93%
ಕಲಾ ಎ ವಿಭಾಗದಲ್ಲಿ ಒಟ್ಟು 44 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 41 ವಿದ್ಯಾರ್ಥಿಗಳು ತೇರ್ಗಡೆಗೊಂಡು, 93% ಶೇ.ಫಲಿತಾಂಶ ಬಂದಿರುತ್ತದೆ.ಪ್ರಶಾಂತ್.ಕೆ(508) ಮತ್ತು ಆಶಿಷತುಲ್ ಜಾಪ್ನ(507) ಅತೀ ಹೆಚ್ಚು ಅಂಕ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.