ಏನೆಕಲ್ಲು : ಮಾದನಮನೆ,ಮಲ್ಲಾರಮನೆ ಕುಟುಂಬದ ಧರ್ಮದೈವ  ಹಾಗೂ ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle

ಏನೆಕಲ್ಲು ಗ್ರಾಮದ ಮಾದನ ಮನೆ ಮತ್ತು ಮಲ್ಲಾರ ಮನೆ ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಮೇ.1 ರಿಂದ ಮೇ.3 ರ ತನಕ ನಡೆಯಲಿದ್ದು ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಎ.17 ರಂದು ನಡೆಯಿತು.
ಕೆಮ್ಮಿಂಜೆ ನಾಗೇಶ ತಂತ್ರಿಗಳು ಆಮಂತ್ರಣವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾದನಮನೆ ಮಲ್ಲಾರ ಮನೆ ಕುಟುಂಬ ದೈವಗಳ ಆಡಳಿತ ಮಂಡಳಿ ಮಹಾಮನೆಯ ಗೌರವಾಧ್ಯಕ್ಷ ರುಕ್ಮಯ ಗೌಡ, ಅಧ್ಯಕ್ಷ  ಮಾಧವ ಗೌಡ ಮಲ್ಲಾರ, ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಉಪಾಧ್ಯಕ್ಷ  ತೇರಕುಮಾರ, ಖಜಾಂಜಿ ಪರಮೇಶ್ವರ, ಸಹಕಾರ್ಯದರ್ಶಿ ಕಿರಣ ಮಾದನ ಮನೆ, ಸದಸ್ಯರಾದ ಶಿವಪ್ರಸಾದ ಮಾದನಮನೆ, ಲೋಕನಾಥ ಮಲ್ಲಾರ, ಕುಟುಂಬ ದೈವಗಳ ನೇಮೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ ಮಾದನಮನೆ ಉಪಾಧ್ಯಕ್ಷ ತೇರಕುಮಾರ ಮಾದನಮನೆ, ಕಾರ್ಯದರ್ಶಿ ದೇವಯ್ಯ ಮಾದನಮನೆ ಮತ್ತು ಶೇಷಪ್ಪ ಗೌಡ ಮಾದನಮನೆ, ಪ್ರಧಾನ ದೈವಾರ್ಚಕರು, ಪರಿವಾರ ದೈವಗಳ ಅರ್ಚಕರು ಹಾಗೂ ಮಾದನಮನೆ ಮಲ್ಲಾರ ಮನೆಯ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.