ಮೇ.04,05 : ಚೆಮ್ನೂರು ಕುಟುಂಬದ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮ ನಡಾವಳಿ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಚೆಮ್ನೂರು ಕುಟುಂಬದ ರುದ್ರಚಾಮುಂಡಿ ಧರ್ಮದೈವ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ಮತ್ತು ಸಹಪರಿವಾರ ದೈವಗಳ ನೇಮ ನಡಾವಳಿಯು ಮೇ 04 ಮತ್ತು 05 ರಂದು ಚೆಮ್ಮೂರು ತರವಾಡು ಮನೆಯಲ್ಲಿ ನಡೆಯಲಿದೆ.
ಎ.27 ರಂದು ಬೆಳಿಗ್ಗೆ ಗೊನೆ ಕಡಿಯಲಾಗುವುದು.
ಮೆ 4 ರಂದು ಪೂರ್ವಾಹ್ನ ಗಂಟೆ 7.00 ಕ್ಕೆ ಗಣಹೋಮ, ನಾಗತಂಬಿಲ 9.30 ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪೂರ್ವಾಹ್ನ ಗಂಟೆ 11.30ಕ್ಕೆ ಶ್ರೀ ವೆಂಕಟರಮಣ ದೇವರ ಹರಿಸೇವೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ ಗಂಟೆ 5.00 ರಿಂದ ಅಮ್ನೂರು ದೇವರ ಗೋಂದೋಳು ಪೂಜೆ, ರಾತ್ರಿ ಗಂಟೆ 8.00 ರ ನಂತರ ದೈವಗಳ ಭಂಡಾರ ಹಿಡಿಯುವುದು, ರಾತ್ರಿ ಗಂಟೆ 10.00 ಕ್ಕೆ ಪಾಷಾಣಮೂರ್ತಿ ದೈವದ ನೇಮ‌ ನಡಾವಳಿ ನಡೆಯಲಿದೆ. ಮೇ.5 ರಂದು ಬೆಳಿಗ್ಗೆ ಗಂಟೆ 4.00 ಕ್ಕೆ ಶ್ರೀ ರಕ್ತೇಶ್ವರಿ ದೈವದ ನೇಮ ನಡಾವಳಿ ನಡೆಯಲಿದೆ. ಬೆಳಿಗ್ಗೆ ಗಂಟೆ 6.00 ಕ್ಕೆ ರುದ್ರಚಾಮುಂಡಿ ಧರ್ಮದೈವ ಮತ್ತು ಶಿರಾಡಿ ದೈವಗಳ ನೇಮ ನಡಾವಳಿ ನಡೆಯಲಿದೆ.
ಬೆಳಿಗ್ಗೆ ಗಂಟೆ 7.00 ಕ್ಕೆ ಮಾರಿಕಳಕ್ಕೆ ಹೋಗುವುದು ನಂತರ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ನಂತರ ಪಂಜುರ್ಲಿ ವಗೈರೆ ದೈವಗಳಗೆ ನೇಮ ನಡಾವಳಿ ನಡೆಯಲಿದೆ ಎಂದು ಚೆಮ್ನೂರು ಕುಟುಂಬಸ್ಥರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.