ಎ. 23-24 : ಮರಕತ ಶ್ರಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ

Advt_Headding_Middle
Advt_Headding_Middle


ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ. 23 ರಿಂದ ಎ. 24 ರವರೆಗೆ ಶ್ರೀ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕ್ಷೇತ್ರ ಪಾಲಿನಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿನಡೆಯಲಿರುವುದು.
ಎ. ೨೩ರಂದು ಪೂ. ೮ ಗಂಟೆಯಿಂದ ದುರ್ಗಾಹವನ, ಪೂ. ೧೧ಕ್ಕೆ ಉಗ್ರಾಣ ತುಂಬಿಸುವುದು, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ೮ ಗಂಟೆಗೆ ಮಹಾಪೂಜೆ, ೯ಕ್ಕೆ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ಕಟ್ಟೆಪೂಜೆ ನಡೆಯಲಿರುವುದು.
ಎ. ೨೪ರಂದು ಪೂ. ಗಂಟೆ ೮ಕ್ಕೆ ಗಣಪತಿ ಹವನ, ಕಲಶ ಪೂಜೆ, ಪೂ. ಗಂ.೯ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ೭ ಗಂಟೆಗ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾ. ೮ ರಿಂದ ಶ್ರೀ ಕ್ಷೇತ್ರದ ದೈವಗಳ ಭಂಡಾರ ತೆಗೆಯುವುದು, ಶ್ರೀ ಕ್ಷೇತ್ರದ ದೈವಗಳ ನೇಮೋತ್ಸವ ನಡೆದು, ರಾ. ೯ರಿಂದ ಶ್ರೀ ರುದ್ರಚಾಮುಂಡಿ ಅಮ್ಮನವರ ನೇಮೋತ್ಸವ ಹಾಗೂ ಪ್ರಸಾದ ವಿತರಣೆ, ರಾ. ಗಂ. ೧ರಿಂದ ಶ್ರೀ ವರ್ಣಾರ ಪಂಜುರ್ಲಿ, ಪುರುಷ ದೈವಗಳ ನೇಮ ನಡೆಯಲಿದ್ದು, ಪ್ರಾತಃಕಾಲ ೪ ಗಂಟೆಯಿಂದ ಕುಪ್ಪೆ ಪಂಜುರ್ಲಿ, ಭೂಮಿಗುಳಿಗ, ರಾಹು ಗುಳಿಗ ದೈವಗಳ ನೇಮೋತ್ಸವ ನಡೆಯಲಿರುವುದು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.