ಪೆರುಮುಂಡ ತರವಾಡು ದೈವಸ್ಥಾನದ ನವೀಕರಣ ಪುನರ್‌ಪ್ರತಿಷ್ಠೆ

Advt_Headding_Middle
Advt_Headding_Middle


ಪೆರುಮುಂಡ ತರವಾಡು ಶ್ರೀ ವಿಷ್ಣುಮೂರ್ತಿ, ಕುಕ್ಕೆತ್ತಿಬೊಲ್ಲು ಮತ್ತು ಸಪರಿವಾರ ದೈವಸ್ಥಾನದಲ್ಲಿ ಎ. 19 ರಂದು ಬ್ರಹ್ಮಶ್ರೀ ಪೆರಾಜೆ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೈವಗಳ ನವೀಕರಣ ಪುನರ್‌ಪ್ರತಿಷ್ಠಾ ಮಹೋತ್ಸವವು ನಡೆಯಿತು. ಎ. 18 ರಂದು ಸಂಜೆ ತಂತ್ರಿಗಳ ಆಗಮನವಾಗಿ ಸಾಮೂಹಿಕ ಪ್ರಾರ್ಥನೆಯಾಗಿ ಪ್ರಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನವಾಗಿ ವಾಸ್ತುಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಪ್ರಾಸಾದ ಬಲಿ ನಡೆಯಿತು.

ಮರುದಿನ ಬೆಳಿಗ್ಗೆ ಗಣಪತಿ ಹವನದೊಂದಿಗೆ ಬ್ರಹ್ಮಕಲಶಪೂಜೆಯಾಗಿ ಶ್ರೀ ದೈವಗಳ ಪ್ರತಿಷ್ಠೆಯಾಗಿ ಕಲಶಾಭಿಷೇಕ ನಡೆಯಿತು. ನಂತರ ತಂಬಿಲ ಸೇವೆ ನಡೆದು, ಮಹಾಪೂಜೆಯಾಗಿ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.