ವೈಭವದಿಂದ ನಡೆದ ಕುಲ್ಕುಂದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ

Advt_Headding_Middle
Advt_Headding_Middle

 

    ಕುಲ್ಕುಂದ ಬಸವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಎ.20 ರಂದು ನಡೆಯಿತು. 


ವೇದಮೂರ್ತಿ ಶಿವರಾಮ ಭಟ್ ಕಿಳಿಂಗಾರು ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರುಗಿತು. ಪೂರ್ವಾಹ್ನ ಗಣಪತಿ ಹವನ, ಶತರುದ್ರಾಭಿಷೇಕ, ಕಲಶಾಭಿಷೇಕ, ನಡೆದು ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ, ತಾಯಾಂಬಿಕ, ರಂಗಪೂಜೆ ನಡೆಯಿತು. ಆ ಬಳಿಕ ಶ್ರೀ ಭೂತಬಲಿ, ಪಲ್ಲಕಿ ಉತ್ಸವ, ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆದು ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮನೋಹರ ನಾಳ, ಕಾರ್ಯದರ್ಶಿ ನಾರಾಯಣ ಅಗ್ರಹಾರ, ಖಜಾಂಜಿ ನಾಗೇಶ್ ಕೈಕಂಬ, ಅರ್ಚಕರಾದ ಗಣೇಶ್ ಕೃಷ್ಣ ದೀಕ್ಷಿತ್, ಆಡಳಿತ ಮಂಡಳಿ ಸದಸ್ಯರುಗಳಾದ ರವೀಂದ್ರ ಕುಮಾರ್ ರುದ್ರಪಾದ, ಶಿವಕುಮಾರ್ ಕಾಮತ್, ರವಿಕಕ್ಕೆಪದವು, ದಿನೇಶ್ ಸಿ.ಡಿ ಕುಲ್ಕುಂದ, ಶೇಖರ ಪಳ್ಳಿಗದ್ದೆ, ಶಿವಣ್ಣ ಜಾಡಿಮನೆ, ಶಿವರಾಮ ಪಳ್ಳಿಗದ್ದೆ, ವಿಜಯಕುಮಾರ್ ನಡುತೋಟ, ರಾಜೇಶ್ ಕುದುರೆಮಜಲು, ಗುಡ್ಡಪ್ಪ ಗೌಡ ಬೀಡಿನಗದ್ದೆ, ಬಾಲಕೃಷ್ಣ ಕೆ ಟೈಲರ್, ಲಕ್ಷ್ಮೀನಾರಾಯಣ ಶೃಂಗೇರಿ, ಚಂದ್ರಶೇಖರ ಬಸವನಮೂಲೆ, ರವಿಶೆಟ್ಟಿ ಕುಲ್ಕುಂದ, ಶೀನಪ್ಪ ಗೌಡ ನಡುತೋಟ, ವೆಂಕಟ್ರಮಣ ಕಳಿಗೆ, ಉತ್ಸವ ಸಮಿತಿಯ ಅಧ್ಯಕ್ಷ ಗಿರೀಶ್ ಆಚಾರ್ಯ ಕಾರ್ಯದರ್ಶಿ ಬೆಳ್ಯಪ್ಪ ಶೃಂಗೇರಿ, ಮಹಿಳಾ ಘಟಕದ ಅಧ್ಯಕ್ಷೆ ಲೀಲಾವತಿ ವೆಂಕಟಾಪುರ, ಕಾರ್ಯದರ್ಶಿ ಕವಿತಾ ಗಣೇಶ್ ಕುಲ್ಕುಂದ, ಯುವ ವಾಹಿನಿಯ ವಿನೋದ್ ಕೆ, ಕಾರ್ಯದರ್ಶಿ ರವಿಚಂದ್ರ ಬೀಡಿನಗದ್ದೆ ಹಾಗೂ ವಿವಿಧ ಸಮಿತಿಯ ಸದಸ್ಯರುಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.