Breaking News

ಅಲೆಕ್ಕಾಡಿ : ಮಕ್ಕಳ ಮನೆ’ ಪೂರ್ವಪ್ರಾಥಮಿಕ ಶಾಲೆಯ ಪೂರ್ವಭಾವಿ ಸಭೆ ಮತ್ತು ಸಮಿತಿ ರಚನೆ

Advt_Headding_Middle
Advt_Headding_Middle

 

ಮುರುಳ್ಯ – ಅಲೆಕ್ಕಾಡಿ ಸ.ಉ.ಹಿ.ಪ್ರಾ ಶಾಲೆಯ ೨೦೧೯-೨೦ರ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ತರಗತಿ ಮುನ್ನುಡಿಯಾಗಿ ಪೂರ್ವಭಾವಿ ಸಭೆಯನ್ನು ಮತ್ತು ಪದಾಧಿಕಾರಿಗಳ ಆಯ್ಕೆಯನ್ನು ಎ.೧೯ರಂದು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಮಧು ಪಿ.ಆರ್. ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ನಿಂಗರಾಜು ಮುಖ್ಯೋಪಧ್ಯಾಯರು ಸ.ಹಿ.ಪ್ರಾ. ಶಾಲೆ ಅಲಂಕಾರು ಇವರು ಪೂರ್ವ ಪ್ರಾಥಮಿಕ ಶಾಲೆಯ ಆರಂಭಿಕ ಸವಾಲುಗಳು ಮತ್ತು ಪರಿಹಾರದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿ ಯೋಜನೆಯ ಯಶಸ್ಸಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಚಂದ್ರಿಕಾ ಬಿ.ಪಿ, ವಲಯ ಸಂಪನ್ಮೂಲ ವ್ಯಕ್ತಿ ಜಯಂತ ಕೆ. ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಬಾಲಕೃಷ್ಣ ಪೂಜಾರಿ ನೂಜಾಡಿ ಸಂದರ್ಭೋಚಿತವಾಗಿ ಮಾತನಾಡಿದರು.
ಸುಮಾರು ಐದು ಲಕ್ಷ ರೂಪಾಯಿಗಳಿಗೂ ಮೇಲ್ಪಟ್ಟ ಖರ್ಚು ವೆಚ್ಚದಲ್ಲಿ ನಡೆಸಲ್ಪಡುವ ಈ ಯೋಜನೆಗೆ ಹಲವಾರು ವಿದ್ಯಾಭಿಮಾನಿಗಳು ಧನಸಹಾಯದ ಒತ್ತಾಸೆಯನ್ನು ಈ ಸಂದರ್ಭದಲ್ಲಿ ನೀಡಿರುವುದು ಗಮರ್ನಾಹವಾಗಿದೆ. “ಸಮಾನ ಶಿಕ್ಷಣ” ಎಂಬ ಧ್ಯೇಯ ವಾಕ್ಯದಲ್ಲಿ ೪ ವರ್ಷ ೫ ತಿಂಗಳು ತುಂಬಿದ ಮಕ್ಕಳಿಗೆ ನಡೆಸಲ್ಪಡುವ ಈ ತರಗತಿಗೆ ಸುಮಾರು ಇಪ್ಪತ್ತರಷ್ಟು ಪೋಷಕರು ತಮ್ಮ ಮಕ್ಕಳನ್ನು ದಾಖಲಿಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಅಭಿನಂದನಾರ್ಹವಾಗಿದೆ.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ, “ಮಿಲ್ಕ್ ಮಾಸ್ಟರ್” ಇವರು ದೇಣಿಗೆಯಾಗಿ ಒಂದು ಲಕ್ಷ ರೂಪಾಯಿಗಳ ಭರವಸೆಯನ್ನು ನೀಡಿದರು. ಸುದೇಶ್ ರೈ ಅಲೆಕ್ಕಾಡಿ, ವೆಂಕಪ್ಪ ಗೌಡ, ಶ್ರೀಮತಿ ಭುವನಮಣಿ, ಶ್ರೀಮತಿ ವಾರಿಜಾ ದಾಮೋಧರ ಗೌಡ ದೇವರಮಜಲು, ಸುಂದರ ಗೌಡ ಪಿಲಂಕುಜೆ, ಶ್ರೀಮತಿ ಸುಪ್ರಿಯಾ, ವಸಂತ್ ಕುಮಾರ್ ಮಂಗಳೂರು, ಲಕ್ಷ್ಮೀಶ ಕೇರ್ಪಡ, ಶ್ರೀಮತಿ ಜಲಜಾ ಶೆಟ್ಟಿ ಲಂಡನ್, ಐತ್ತಪ್ಪ ಅಲೆಕ್ಕಾಡಿ, ಸುಶಾಂತ್ ಅಲೆಕ್ಕಾಡಿ ದೇಣಿಗೆ ನೀಡುವ ಭರವಸೆಯನ್ನು ನೀಡಿದರು. ಸಮಿತಿಯ ಗೌರವಾಧ್ಯಕ್ಷರಾಗಿ ಸುದೇಶ್ ರೈ ಅಲೆಕ್ಕಾಡಿ ಹಾಗೂ ಸುಂದರ ಗೌಡ, ಅಧ್ಯಕ್ಷರಾಗಿ ಅವಿನಾಶ್ ದೇವರಮಜಲು, ಉಪಾಧ್ಯಕ್ಷರಾಗಿ ಐತಪ್ಪ ಅಲೆಕ್ಕಾಡಿ, ಕಾರ್ಯದರ್ಶಿಯಾಗಿ ಶ್ರೀಮತಿ ಮಧು ಪಿ.ಆರ್ ಆಯ್ಕೆಯಾದರು. ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.