Breaking News

ಅಮೇಥಿಯಲ್ಲಿ ಡಾ.ಯು.ಪಿ.ಶಿವಾನಂದರಿಂದ ನಾಮಪತ್ರ ಸಲ್ಲಿಕೆ

Advt_Headding_Middle
Advt_Headding_Middle

 

ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುದ್ದಿ ಬಿಡು ಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ| ಯು.ಪಿ.ಶಿವಾನಂದರವರು ಎಪ್ರಿಲ್ 18 ರಂದು ನಾಮಪತ್ರ ಸಲ್ಲಿಸಿದ್ದಾರೆ. ಎ.20 ರಂದು ನಾಮಪತ್ರ ಪರಿಶೀಲನೆ ನಡೆದಿದ್ದು ಯು.ಪಿ. ಶಿವಾನಂದರವರ ನಾಮಪತ್ರ ಅಂಗೀಕೃತಗೊಂಡಿದೆ.

 

ಯು.ಪಿ. ಶಿವಾನಂದರ ವರಿಂದ ಎ.18ರಂದು ನಾಮ ಪತ್ರ ಸಲ್ಲಿಕೆ:

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಪರ್ಧಿಸುತ್ತಿ ರುವ ಅಮೇಥಿ ಲೋಕಸಭಾ ಕ್ಷೇತ್ರ ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರೂ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇ ಶಕರೂ ಆಗಿರುವ ಡಾ.ಯು.ಪಿ. ಶಿವಾನಂದರವರು ಎ.೧೮ರಂದು ಅಮೇಥಿಯ ಗೌರಿಗಂಜ್‌ನಲ್ಲಿರುವ ಚುನಾವಣಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಅಮೇಥಿ ಲೋಕಸಭಾ ಕ್ಷೇತ್ರದ ೧೦ ಮಂದಿ ಮತದಾರರು ಇವರಿಗೆ ಸೂಚಕರಾಗಿ ದರು. ಎ.೨೦ರಂದು ನಾಮಪತ್ರ ಪರೀಶಿಲನೆ ನಡೆದಿದ್ದು ಯು.ಪಿ. ಶಿವಾನಂದರವರ ನಾಮಪತ್ರ ಸ್ವೀಕೃತ ಗೊಂಡಿದೆ. ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರದ ಸಚಿವೆ ಸ್ಮತಿ ಇರಾನಿ ಸ್ಪರ್ಧಿಸುತ್ತಿದ್ದಾರೆ.


ವಾರಣಾಸಿಯಲ್ಲೂ
ಡಾ| ಶಿವಾನಂದರಿಂದ ಸ್ಪರ್ಧೆ:
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿ ಸುವ ವಾರಣಾಸಿ ಲೋಕಸಭಾ ಕ್ಷೇತ್ರ ದಲ್ಲಿಯೂ ಡಾ.ಯು.ಪಿ. ಶಿವಾನಂದ ರವರು ಸ್ಪರ್ಧಿಸಲಿದ್ದು ನಾಮ ಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ವಾರ ಣಾಸಿ ಕ್ಷೇತ್ರದಲ್ಲಿ ಮೋದಿಯವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸಹೋದರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಅಮೇಥಿ ಕ್ಷೇತ್ರದ ಗೌರಿ ಗಂಜ್, ಜಿಲ್ಲಾಧಿಕಾರಿ ಕಛೇರಿ ಅವರಣದಲ್ಲಿ ಮತದಾರರು ಹಾಗೂ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಚುನಾವಣೆಯ ಕುರಿತು ಚರ್ಚೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.