ಎ.  27 : ಅಶ್ವಿನಿ ಕೋಡಿಬೈಲುರವರ ಶಬರಿಮಲೆ ಸ್ವಾಮಿ ಅಯ್ಯಪ್ಪ – ನೃತ್ಯ ರೂಪಕ ಕೃತಿ ಲೋಕಾರ್ಪಣೆ

Advt_Headding_Middle
Advt_Headding_Middle

ಸೌಗಂಧಿಕಾ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅಶ್ವಿನಿ ಕೋಡಿಬೈಲುರವರ ಎರಡನೇ ಕೃತಿ ಶಬರಿಮಲೆ ಸ್ವಾಮಿ ಅಯ್ಯಪ್ಪ ನೃತ್ಯರೂಪಕವು ಎಪ್ರಿಲ್ 27 ರಂದು ಸಂಜೆ 7.30 ಕ್ಕೆ ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಾಡಿನ ಹೆಸರಾಂತ ಹಿರಿಯ ಕವಿಗಳಾದ ಶ್ರೀ ಸುಬ್ರಾಯ ಚೊಕ್ಕಾಡಿಯವರಿಂದ ಲೋಕಾರ್ಪಣೆಗಳ್ಳಲಿದೆ. ಸುಳ್ಯದ ಪತ್ರಕರ್ತರಾದ ಶ್ರೀ ದುರ್ಗಾಕುಮಾರ್ ನಾಯರ್‌ಕೆರೆಯವರು ಈ ಕೃತಿಯನ್ನು ಪರಿಚಯಿಸಲಿದ್ದು ವಿದುಷಿ ನಯನ ವಿ. ರೈ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ವೈಷ್ಣವಿ ನಾಟ್ಯಾಲಯ (ರಿ) ಪುತ್ತೂರು, ಇದರ ಬೆಳ್ಳಾರೆ ಶಾಖೆಯ ವಾರ್ಷಿಕೋತ್ಸವ – ವೈಷ್ಣವಿ ನೃತ್ಯ ಸಂಭ್ರಮ ೨೦೧೯ ಈ ಕಾರ್ಯಕ್ರಮದಲ್ಲಿ ಕೃತಿಯು ಲೋಕಾರ್ಪಣೆಗೊಳ್ಳಲಿದ್ದು ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್‌ರವರ ರಾಗಸಂಯೋಜನೆ ಮತ್ತು ಹಾಡುಗಾರಿಕೆ, ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರ ನೃತ್ಯ ಸಂಯೋಜನೆ ಮತ್ತು ನಟುವಾಂಗದೊಂದಿಗೆ ಈ ನೃತ್ಯ ರೂಪಕದ ಮೂರನೇ ಪ್ರದರ್ಶನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.