ಅಡ್ಕಾರು ಕುಟುಂಬದ ವಿಷ್ಣುಮೂರ್ತಿ, ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ತರವಾಡು ಮನೆ ಪ್ರವೇಶೋತ್ಸವ, ಎ.೨೭-೨೮: ದೈವಗಳ ನೇಮೋತ್ಸವ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಅಡ್ಕಾರು ಕುಟುಂಬದ ಶ್ರೀ ವಿಷ್ಣುಮೂರ್ತಿ ದೈವ, ಧರ್ಮದೈವ ಶ್ರೀ ರುದ್ರಚಾಮುಂಡಿ, ಶ್ರೀ ಮುನಿಸ್ವಾಮಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ತರವಾಡು ಮನೆ ಪ್ರವೇಶೋತ್ಸವ ಮತ್ತು ದೈವಗಳ ನೇಮೋತ್ಸವವು ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ರ ಮಧೂರು ಇವರ ನೇತೃತ್ವದಲ್ಲಿ ಎ.೨೫ರಿಂದ ಆರಂಭಗೊಂಡಿದ್ದು ಎ.೨೮ ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.25 ರಂದು ಉಗ್ರಾಣ ತುಂಬಿಸುವುದು, ತಂತ್ರಿಗಳ ಆಗಮನವಾಗಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹಃ, ಗಣಪತಿ ಹೋಮ, ಖನವಾದಿ, ಸಪ್ತ ಶುದ್ಧಿ, ಅನ್ನಸಂತರ್ಪಣೆ ನಡೆಯಿತು, ಸಂಜೆ ವಾಸ್ತು ಪೂಜೆ, ರಕ್ಷೋಘ್ನ ಹೋಮ, ವಾಸ್ತು ಬಲಿ, ನೂತನ ಪೀಠ ಹಾಗೂ ಆಯುಧಗಳ ಜಲಾಧಿವಾಸ, ಅಧಿವಾಸ. ಅನ್ನಸಂತರ್ಪಣೆ ನಡೆಯಿತು.
ಎ.26 ರಂದು ಬೆಳಿಗ್ಗೆ 7ರಿಂದ ಗಣಹೋಮ, ಬ್ರಹ್ಮಕಲಶಪೂಜೆ, ಶ್ರೀ ದೈವಗಳ ಪೀಠಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮುನಿಸ್ವಾಮಿ, ಉಪದೈವಗಳ ತಂಬಿಲ, ನೂತನ ತರವಾಡು ಮನೆ ಪ್ರವೇಶ, ಮುಡಿಪು ಪೂಜೆ, ನಾಗತಂಬಿಲ, ದೈವಗಳ ತಂಬಿಲ, ನಿತ್ಯ ನಿಯಮ ನಿರ್ಣಯ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.
ಎ.27-28 – ದೈವಗಳ ನೇಮೋತ್ಸವ : ಎ.27ರಂದು ಸಂಜೆ 6.3೦ಕ್ಕೆ ಶ್ರೀ ದೈವಗಳ ಬಂಡಾರ ತೆಗೆಯುವುದು, ರಾತ್ರಿ ಗಂಟೆ 7ರಿಂದ ಶ್ರೀ ವಿಷ್ಣುಮೂರ್ತಿ ದೈವದ ಪ್ರಾರಂಭ (ತೊಡಂಙಲ್), ರಾತ್ರಿ ಗಂಟೆ ೮ರಿಂದ ಗುರುಕಾರ್ನೂರು ನೇಮೋತ್ಸವ, ಗಂಟೆ 9 ರಿಂದ ಅನ್ನಸಂತರ್ಪಣೆ ನಂತರ ಜಾವತೆ, ಪಾಷಾಣಮೂರ್ತಿ, ಅಜ್ಜಿ ಪಾಷಾಣಮೂರ್ತಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಎ.28ರಂದು ಬೆಳಿಗ್ಗೆ 9 ರಿಂದ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮದೈವ ರುದ್ರಚಾಮುಂಡಿ ದೈವಗಳ ನೇಮೋತ್ಸವ ಹಾಗೂ ಧರ್ಮ ನಡಾವಳಿ, ಮಧ್ಯಾಹ್ನ ಗಂಟೆ 1ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6 ರಿಂದ ಮಂತ್ರವಾದಿ ಗುಳಿಗ, ರಾಹು ಗುಳಿಗ, ಬಂಟ ಗುಳಿಗ ನೇಮೋತ್ಸವ, ರಾತ್ರಿ 9.3೦ರಿಂದ ಅನ್ನಸಂತರ್ಪಣೆ ನಡಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.