Breaking News

ಕುಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ 15  ಶಿಲಾಶಾಸನಗಳು ದೊರೆತಿವೆ: ಡಾ.ಕೆ.ಎಸ್.ಎನ್ ಉಡುಪ

Advt_Headding_Middle
Advt_Headding_Middle

ಶಿಲಾಶಾಸನಗಳನ್ನು ರಾಜರು ಹೊರಡಿಸುತ್ತಿದ್ದರು.ಕಲ್ಲಿನಲ್ಲಿ ಬರೆದ ಈ ಆಕರಗಳು ಪ್ರಾಚೀನ ಕಾಲದ ರಾಜಾಜ್ಞೆಗಳಾಗಿದ್ದವು.ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಬಂದಿಸಿದಂತೆ 15 ಶಿಲಾ ಶಾಸನಗಳು ದೊರಕಿವೆ.

ಅವುಗಳಲ್ಲಿ ಕಡಬದ ಮರ್ದಾಳದ ಬಂಟ್ರದಲ್ಲಿ ಸಿಕ್ಕಿದ ಶಾಸನವು ಮೊದಲ ಶಾಸನವಾಗಿದೆ ಎಂದು ಇತಿಹಾಸ ತಜ್ಞ ಹಾಗೂ ವಿಶ್ರಾಂತ ಉಪನ್ಯಾಸಕ ಡಾ.ಕೆ.ಎಸ್.ಎನ್ ಉಡುಪ ಹೇಳಿದರು.
ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಾವಿದ್ಯಾಲಯ ಮತ್ತು ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ನಡೆದ ಕುಕ್ಕೆ ಕ್ಷೇತ್ರದ ಶಿಲಾಶಾಸನಗಳ ಮಾಹಿತಿ ಮತ್ತು ಶಿಲಾಶಾಸನಗಳ ಪ್ರಾತ್ಯಕ್ಷಿಕೆ ಕಾರ‍್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಶಿಲಾ ಶಾಸನಗಳಲ್ಲಿ ಬರಹ ಇದ್ದರೂ ಇರಬಹುದು ಅಥವಾ ಇಲ್ಲದಿರಲೂ ಬಹುದು.ಕೆಲವೊಂದು ಶಾಸನಗಳು ಕೇವಲ ಚಿತ್ರಗಳನ್ನು ಮಾತ್ರ ಹೊಂದಿರುವ ಸಾಧ್ಯತೆಗಳು ಇವೆ. ಶಾಸನಗಳಲ್ಲಿ ಲಿಂಗಮುದ್ರೆ ಕಲ್ಲು, ಗಡಿಕಲ್ಲು, ಶಿವಮುದ್ರೆ ಕಲ್ಲು, ಮುಕ್ಕುಡೆ ಕಲ್ಲು, ವಾಮನ ಮುದ್ರೆ ಕಲ್ಲು, ಮಾಸ್ತಿ ಕಲ್ಲು ಒಕೈಮಾಸ್ತಿ, ಇಕ್ಕೈ ಮಾಸ್ತಿ, ವೀರಗಲ್ಲು ಇನ್ನೂ ಅನೇಕ ವಿಧಗಳಿವೆ ಎಂದರು.

ಲಿಂಗಮುದ್ರೆ ಶಾಸನದ ಪ್ರಾತ್ಯಕ್ಷಿಕೆ:
ಬಳಿಕ ಡಾ.ಉಡುಪ ಅವರು ಸುಬ್ರಹ್ಮಣ್ಯದ ಏಕಶಿಲಾ ಗಣಪತಿ ವಿಗ್ರಹದ ಸಮೀಪದಲ್ಲಿರುವ ಎರಡು ಲಿಂಗ ಮುದ್ರೆ ಶಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ಅದರಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ಆಚಂದ್ರಾರ್ಕ ತಾರಾಂಬರಂ ಎಂಬ ವಿವರಣೆಯನ್ನು ನೀಡಿದರು.ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿರುವ ಮಯೂರ ಲಾಂಛನ ಶಿಲಾಶಾಸನ ಹಾಗೂ ಸಂಕಲ್ಪ ಮಂದಿರದಲ್ಲಿನ ಶಿಲಾಶಾಸನದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಂಜುನಾಥ್ ಎನ್ ಭಟ್, ಉಪನ್ಯಾಸಕ ರಾಮ್ ಪ್ರಸಾದ್ ಮತ್ತು ಸಂಸ್ಕೃತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.