Breaking News

ಎ.30  : ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲೇಖಪಾಲೆ ಶ್ರೀಮತಿ ಪಿ.ಭವಾನಿ ನಿವೃತ್ತಿ – ಬೀಳ್ಕೊಡುಗೆ ಮತ್ತು ಸನ್ಮಾನ

Advt_Headding_Middle
Advt_Headding_Middle

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಲೇಖಪಾಲೆಯಾಗಿ ಸೇವೆಸಲ್ಲಿಸುತ್ತಿದ್ದ ಶ್ರೀಮತಿ ಪಿ.ಭವಾನಿಯವರು ಎ.೩೦ ರಂದು ಸೇವಾನಿವೃತ್ತಿ ಹೊಂದಲಿದ್ದಾರೆ.


1979 ರಲ್ಲಿ ಸಹಕಾರಿ ಸಂಘದಲ್ಲಿ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರಿದ ಇವರು ನಂತರ ಮಡಿಕೇರಿಯಲ್ಲಿ ಜಿ.ಡಿ.ಸಿ ತರಬೇತಿ ಮುಗಿಸಿ ನಂತರ ಕಚೇರಿಯಲ್ಲಿ ನಗದು ಗುಮಾಸ್ತರಾಗಿ ನಂತರ ಲೇಖಪಾಲೆಯಾಗಿ ಸುಮಾರು 40 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದ ಇವರು ಎ.30  ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.
ಐವರ್ನಾಡು ಗ್ರಾಮದ ಎಡಮಲೆಯವರಾದ ಇವರು ಸಹಕಾರಿ ಸಂಘದ ನಿವೃತ್ತ ಲೇಖಪಾಲರಾದ ಜನಾರ್ದನ ಗೌಡ ಎಡಮಲೆಯವರ ಪತ್ನಿ,ಇವರ ಪುತ್ರ ರಕ್ಷಿತ್ ರವರು ಕೃಷಿಕರಾಗಿದ್ದಾರೆ, ಪುತ್ರಿ ಮಂಡೆಕೋಲಿನ ಕಾಯರ್ತೋಡಿ ಪ್ರದೀಪ್‌ರವರೊಂದಿಗೆ ವಿವಾಹವಾಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.

ಬೀಳ್ಕೊಡುಗೆ ಮತ್ತು ಸನ್ಮಾನ: ನಿವೃತ್ತಿಗೊಂಡ ಶ್ರೀಮತಿ ಪಿ.ಭವಾನಿಯವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವು ಎ.30 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಅಪರಾಹ್ನ ಗಂಟೆ 4.೦೦ ಕ್ಕೆ ನಡೆಯಲಿದೆ.
ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಚತೆ ವಹಿಸಲಿದ್ದಾರೆ.
ಸಂಘದ ಮಾಜಿ ಅಧ್ಯಕ್ಷರಾದ ಡಾ.ಬಾಲಸುಬ್ರಹ್ಮಣ್ಯ ಭಟ್ ಸನ್ಮಾನಿಸಲಿದ್ದಾರೆ.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚೈತ್ರಾ ಕಟ್ಟತ್ತಾರು, ಐವರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಾಲಚಂದ್ರ ಗೌಡ, ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ ಗೌಡ ಉಪಸ್ಥಿತರಿರುವರು ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.