ಭಜನೆಯಿಂದ ದೇವರನ್ನು ಅತೀ ಹತ್ತಿರದಿಂದ ಕಾಣಬಹುದು: ಡಾ. ಪಿ.ಆರ್.ಭಟ್

Advt_Headding_Middle
Advt_Headding_Middle

ಕೇರ್ಪಡ ಪತ್ರಿಷ್ಠಾ ವರ್ದಂತಿ ಉತ್ಸವ, ಏಕಾಹ ಭಜನಾ ಕಾರ್ಯಕ್ರಮ
ಭಜನೆಯು ದೇವರನ್ನು ಪೂಜಿಸುವ ವಿಧಾನಗಳಲ್ಲಿ ಒಂದು. ಬಹಳ ಪ್ರಾಮುಖ್ಯತೆಯಿಂದ ದೇವರನ್ನು ಒಲಿಸಿಕೊಳ್ಳಲು ಮತ್ತು ಅತೀ ಹತ್ತಿರದಿಂದ ದೇವರನ್ನು ಕಾಣಬಹುದು ಎಂದು ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಡಾ.ಪಿ.ಆರ್.ಭಟ್ ಹೇಳಿದರು. ಅವರು ಕೇರ್ಪಡ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ಏಕಾಹ ಭಜನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಕು. ವಿಪ್ರಾ ಪ್ರಭಾಕರ್ ನಾವೂರು ದೀಪ ಬೆಳಗಿಸಿ ಉದ್ಘಾಟಸಿ ಭಜನೆ ಮಾಡಿದರು.

ಈ ಸಂದರ್ಭದಲ್ಲಿ ಭಜನಾ ತಂಡಗಳು, ದೇವಳದ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ., ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಹೂವಿನ ಅಲಂಕಾರ ಹಾಗೂ ವಿದ್ಯುದ್ದೀಪಾಲಂಕಾರಗಳಿಂದ ದೇವಸ್ಥಾನ ಕಂಗೊಳಿಸುತ್ತಿತ್ತು.
ನಾನಾ ಊರುಗಳಿಂದ ಆಗಮಿಸಿದ ಭಜನಾ ತಂಡಗಳು ಭಾಗವಹಿಸಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.