ಮೇ 4 ರಂದು ಗೂನಡ್ಕ ದಾರುಲ್ ಖೈರ್ ಮನೆಯ ಹಸ್ತಾಂತರ,5 ನೇ ವಾರ್ಷಿಕ ಜಲಾಲಿಯ್ಯಾ ಮತ್ತು ಸಾರ್ವಜನಿಕ ಸಮಾರಂಭ, ಮೇ 5 ಕ್ಕೆ ಗೃಹ ಪ್ರವೇಶ

Advt_Headding_Middle
Advt_Headding_Middle

SYS & SSF ಸಾಂತ್ವನ ಸಮೀತಿ ಗೂನಡ್ಕ ಪ್ರಾಯೋಜಿತ ದಾನಿಗಳ ಸಹಕಾರದೊಂದಿಗೆ ದಿವಂಗತ ಆದಂ ಕುಞ್ಞಿ ಪೆಲ್ತಡ್ಕ ರವರ ಅನಾಥ ಕುಟುಂಬಕ್ಕೆ ನಿರ್ಮಿಸಲ್ಪಟ್ಟ ಎಂಟುವರೆ ಲಕ್ಷದ ದಾರುಲ್ ಖೈರ್ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವು ಮೇ 4 ಶನಿವಾರ ಬದ್ರಿಯಾ ಜುಮಾ ಮಸೀದಿ ವಠಾರ ಗೂನಡ್ಕದಲ್ಲಿ ನಡೆಯಲಿದೆ.

ಸಂಜೆ 4 30 ಕ್ಕೆ ಐದನೇ ವಾರ್ಷಿಕ ಜಲಾಲಿಯ್ಯಾ ಹಮ್ಮಿಕೊಂಡಿದ್ದು ಅಸ್ಸೆಯ್ಯಿದ್ ಅಹ್ಮದ್ ಖಾಸಿಂ ತಂಙಳ್ ಕುಂಟಾರ್ ನೇತೃತ್ವ ವಹಿಸುವರು.ಸಂಜೆ 7ಕ್ಕೆ ಸಾರ್ವಜನಿಕ ಸಭಾ ಕಾರ್ಯ ಕ್ರಮ ನಡೆಯಲಿದೆ. ಸಮಿತಿ ಚಯರ್ಮಾನ್ ಎಸ್ ಎಂ ಅಬ್ದುಲ್ಲ ಅಧ್ಯಕ್ಷತೆ ವಹಿಸಲಿದ್ದು,ಕೆ ವಿ ಜಿ ಆಯುರ್ವೇದ ಕಾಲೇಜು ಆಡಳಿತಾಧಿಕಾರಿ ಡಾ.ಲೀಲಾಧರ ಉಧ್ಘಾಟಿಸಲಿದ್ದಾರೆ.ಎಸ್ ಎಸ್ ಎಫ್ ಮಾಜಿ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಂಡಂಕೇರಿ ಸಂದೇಶ ಭಾಷಣ,ಲಯನ್ಸ್ ಕ್ಲಬ್ಬ್ ಮಾಜಿ ಗವರ್ನರ್ ಎಂ ಬಿ ಸದಾಶಿವ ಸೌಹಾರ್ಧ ಭಾಷಣ,ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ ಎಸ್ ಎಂ ಅಬ್ದುರ್ರಶೀದ್ ಝೈನಿ ಮುಖ್ಯ ಪ್ರಭಾಷಣ,ಎಸ್ ಎಂ ಎ ಸುಳ್ಯ ರಿಜೀನಲ್ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ಸಮಾರೋಪ ಭಾಷಣಗೈಯ್ಯಲಿರುವರು. ಕಾರ್ಯಕ್ರಮದಲ್ಲಿ ಶ್ರೀ ಪದ್ಮನಾಭ ಸ್ವಾಮಿ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಿ ಮೇನಾಲ,ರೆ. ಫಾ ನವೀನ್ ಪ್ರಕಾಶ್ ಪಿಂಟೊ ಧರ್ಮ ಗುರುಗಳು ಸೈಂಟ್ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಕಲ್ಲುಗುಂಡಿ,ಗೂನಡ್ಕ ಜಮಾಅತ್ ಅಧ್ಯಕ್ಷ ಹಾಜಿ ಉಮ್ಮರ್ ಪಿ ಎ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮೇ.5 ಆದಿತ್ಯವಾರ ಬೆಳಿಗ್ಗೆ ದಾರುಲ್ ಖೈರ್ ಗೃಹ ಪ್ರವೇಶ ನಡೆಯಲಿದ್ದು ಅಸ್ಸಯ್ಯಿದ್ ಅಶ್ರಫ್ ತಂಙಳ್ ಮಂಞ್ಞಂಪಾರ ಪ್ರಾರ್ಥನೆಗೈದು,ಗೂನಡ್ಕ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ನೇತ್ರ್ ತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಲಿದೆ. ಈ ಮನೆ ನಿರ್ಮಾಣ ದಲ್ಲಿ ಜಾತಿ ಮತ ಪಂಗಡ ಭೇಧವಿಲ್ಲದೇ ಸಹೃದಯಿ ಭಾಂದವರು ಕೈ ಜೋಡಿಸಿದ್ದು,ಆ ಪ್ರಯುಕ್ತ ಮಧ್ಯಾಹ್ನ ಹನ್ನೆರಡರಿಂದ ಸರ್ವರಿಗೂ ಊಟೋಪಚಾರ ಏರ್ಪಡಿಸಲಾಗಿದೆ.ಆದುದರಿಂದ ಸಾರ್ವಜನಿಕರು ಇದನ್ನೇ ವ್ಯಯಕ್ತಿಕ ಆಮಂತ್ರಣವೆಂದು ಮನಗಂಡು ಹೆಚ್ಚಿನ ಸಂಖೈಯಲ್ಲಿ ಭಾಗವಹಿಸಿ ದೇಶ್ಯಾದ್ಯಂತ ಮಾನವತೆಯ ಸಂದೇಶ ಸಾರಲು ಸಹಕರಿಸಬೇಕಾಗಿ ಸಂಘಟಕರ ಪರವಾಗಿ ಸಮಿತಿ ಕನ್ವೀನರ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.