Breaking News

ಬೆಳ್ಳಾರೆಯಲ್ಲಿ ವೈಷ್ಣವಿ ನೃತ್ಯ ಸಂಭ್ರಮ

Advt_Headding_Middle
Advt_Headding_Middle

ಶಬರಿಮಲೆ ಸ್ವಾಮಿ ಅಯ್ಯಪ್ಪ ನೃತ್ಯ ರೂಪಕ ಕೃತಿ ಬಿಡುಗಡೆ
ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬೆಳ್ಳಾರೆ ಶಾಖೆಯ ನೃತ್ಯ ಸಂಭ್ರಮವು ಎ. 27ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಪುತ್ತೂರು ವಿಶ್ವಕಲಾನಿಕೇತನದ ನೃತ್ಯ ಗುರುಗಳಾದ ವಿದುಷಿ ನಯನಾ ವಿ. ರೈ ಯವರು ದೀಪ ಪ್ರಜ್ವಲನೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಕವಯಿತ್ರಿ ಶ್ರೀಮತಿ ಅಶ್ವಿನಿ ಕೋಡಿಬೈಲುರವರು ರಚಿಸಿದ “ಶಬರಿಮಲೆ ಸ್ವಾಮಿ ಅಯ್ಯಪ್ಪ” ನೃತ್ಯ ರೂಪಕ ಕೃತಿಯು ಲೋಕಾರ್ಪಣೆಗೊಂಡಿತು. ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿಯವರು ಕೃತಿ ಬಿಡುಗಡೆಗೊಳಿಸಿದರು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಕೃತಿ ಪರಿಚಯ ಮಾಡಿದರು. ನಯನಾ ವಿ. ರೈಯವರು ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ಅಶ್ವಿನಿ ಕೋಡಿಬೈಲು ಮಾತನಾಡಿದರು. ವೈಷ್ಣವಿ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಸ್ವಾಗತಿಸಿ ಪ್ರಸ್ತಾವನೆಗೈದರು. ಸ್ವಾತಿ ವಂದಿಸಿದರು. ಪ್ರದೀಪ್‌ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

ನೃತ್ಯ ರೂಪಕದ ರಾಗಸಂಯೋಜನೆ ನಡೆಸಿದ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ಹಾಡುಗಾರಿಕೆಯಲ್ಲಿ ಸಹಕರಿಸಿದ ವಿದ್ವಾನ್ ವಸಂತಕುಮಾರ್ ಗೋಸಾಡ ಸೇರಿದಂತೆ ಹಿಮ್ಮೇಳದ ಕಲಾವಿದರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪ ನೃತ್ಯ ರೂಪಕದ ೩ನೇ ಪ್ರದರ್ಶನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.