ಪಂಜ: ಮಕ್ಕಳ ಭಜನಾ ತರಬೇತಿ-ವಿಕಸನ ಶಿಬಿರ ಸಮಾರೋಪ

Advt_Headding_Middle
Advt_Headding_Middle

ಭಜನೆಯಿಂದ ಏಕಾಗ್ರತೆ ,ಜ್ಞಾನ ವಿಕಾಸ- ಮೋಹನದಾಸ್ ಸ್ವಾಮೀಜಿ

“ಮಕ್ಕಳು ಕೆಟ್ಟ ಆಕರ್ಷಣೆಗಳಿಗೆ ಮಾರು ಹೋಗದಂತೆ ,ಭಕ್ತಿ ಮಾರ್ಗ ಸಂಸ್ಕಾರಯುತ ಜೀವನ ಮೈಗೂಡಿಸಲು ಅವರನ್ನು ಭಜನೆಯಲ್ಲಿ ಬೆರೆಯುವಂತೆ ಮಾಡಬೇಕು. ಭಜನೆ ದೇವgನ್ನು ಕಾಣಲು ಸುಲಭ ದಾರಿ. ಅದು ಸಮಾಜದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣಲು ಹೇಳಿಕೊಡುತ್ತದೆ. ವಿಶೇಷವಾಗಿ ಏಕಾಗ್ರತೆ ಮತ್ತು ಜ್ಞಾನದ ವಿಕಾಸವಾಗುತ್ತದೆ.”ಎಂದು ಶ್ರೀಧಾಮ ಮಣಿಲದ ಸ್ವಾಮೀಜಿ ಪರಮಪೂಜ್ಯ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಜಂಟಿ ಆಶ್ರಯದಲ್ಲಿ ಪಂಜ ಶ್ರೀ ಶಾರಾದಂಬಾ ಭಜನಾ ಮಂದಿರದಲ್ಲಿ ಎ.೨೭.ರಂದು ಜರುಗಿದ ೯ನೇ ವರುಷದ ಉಚಿತ ಮಕ್ಕಳ ಭಜನಾ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯ ಪರಿಷತ್ ಕಾರ್ಯದರ್ಶಿ ಮತ್ತು ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ಪ್ರಾ.ಕೃ.ಪ.ಸ ಸಂಘದ ಉಪಾಧ್ಯಕ್ಷ ಲೋಕೇಶ್ ಬರೆಮೇಲು, ಪಂಜ ಗ್ರಾ.ಪ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣೆಯಾನ, ಪಂಜ ಪ್ರಾ.ಕೃ.ಪ.ಸ.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ, ಪಂಜ ಜೇಸಿಐ ಪಂಚಶ್ರೀಯ ಪೂರ್ವಾಧ್ಯಕ್ಷ ತೀರ್ಥಾನಂದ ಕೊಡೆಂಕಿರಿ, ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ,ಭಜನಾ ಮಂದಿರದ ಅಧ್ಯಕ್ಷ ,ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ.ವಲಯ ಮೇಲ್ವಿಚಾರಕಿ ಭಾಗೀರಥಿ ಸಗತಿಸಿದರು.ಬಾಲಕೃಷ್ಣ ಪುತ್ಯ ಮತ್ತು ಸುಗಂಧಿನಿ ಬಾಲಕೃಷ್ಣ ಪುತ್ಯ ರವರು ಸ್ವಾಮೀಜಿಗೆ ಫಲ ಪುಷ್ಪ ನೀಡಿ ಗೌರವಿಸಿದರು.ನಳಿನಿ ವಿ ಆಚಾರ್ಯ ನಿರೂಪಿಸಿದರು.ವಿಶ್ವನಾಥ ಸಂಪ ವಂದಿಸಿದರು. ಕಾರ‍್ಯಕ್ರಮದಲ್ಲಿ ಯಕ್ಷಗಾನ ಭಜನೆ,ಕುಣಿತ ಭಜನೆ ಪ್ರಾತ್ಯಕ್ಷತೆ ನಡೆಯಿತು. ಒಟ್ಟು ೧೩೬ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ತರಬೇತುದಾರರಾಗಿ ನಳಿನಿ ವಿ ಆಚಾರ್ಯ ಕಲ್ಮಡ್ಕ, ರಮೇಶ್ ಮೆಟ್ಟಿನಡ್ಕ, ಶೃದ್ಧಾಲಕ್ಷ್ಮೀ ಕೆಮ್ಮೂರು, ವಿಶ್ವನಾಥ ರೈ ಅರ್ಗುಡಿ, ಮಹಾಲಿಂಗ ಸಂಪ, ವೆಂಕಟ್ರಮಣ ಆಚಾರ್ಯ ಕಲ್ಮಡ್ಕ, ಸತೀಶ್ ಪಂಜ, ಪುರಂದರ ಶೆಟ್ಟಿ ನಾಗತೀರ್ಥ, ಸೋಮಶೇಖರ ಬೀದಿಗುಡ್ಡೆ ಸಹಕರಿಸಿದರು.ಕಾರ‍್ಯಕ್ರಮದ ಯಶಸ್ವಿಗೆ ಸಹಕರಿದವರನ್ನು ಗೌರವಿಸಲಾಯಿತು.

“ಅತೀ ಹೆಚ್ಚು ಮಕ್ಕಳಿಗೆ ಏಳು ದಿನಗಳ ಕಾಲ ಯಶಸ್ವಿಯಾಗಿ ನಡೆದ ಭಜನೆ ಮತ್ತು ವಿಕಸನ ತರಬೇತಿಯು ಮಾದರಿ ಕಾರ‍್ಯಕ್ರಮವಾಗಿದೆ.”- ಜಯರಾಮ ನೆಲ್ಲಿತ್ತಾಯ
“ಭಜನೆಯಿಂದ ಉತ್ತಮ ಮನ-ಮನೆಗಳನ್ನು ನಿರ್ಮಿಸಲು ಸಾಧ್ಯವಿದೆ.” ? ಪುರುಷೋತ್ತಮ ಮಣಿಯಾನ
“ಹಿಂದೆ ಅಕ್ಷರ ಅಭ್ಯಾಸವಿಲ್ಲದಿದ್ದರೂ ಲೋಕ-ಭಕ್ತಿಯ ಜ್ಞಾನವಿತ್ತು.ಇಂದು ಪ್ರತಿಯೊಬ್ಬನು ಭಜನೆ-ಭಕ್ತಿ ಮಾರ್ಗವನ್ನು ಮೈಗೂಡಿಸಿ ಕೊಳ್ಳಿ.”-ವಿಶ್ವನಾಥ ರೈ ಅರ್ಗುಡಿ

“ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆಗಳು ಅಡಗಿರುತ್ತದೆ. ಅವುಗಳನ್ನು ಹೊರತೆಗೆಯುವ ಭಕ್ತಿ ಮಾರ್ಗದಲ್ಲಿ ಕೊಂಡೂಯ್ಯುವ ಕಾರ್ಯಕ್ರಮ ಇದು”- ತೀರ್ಥಾನಂದ ಕೊಡೆಂಕಿರಿ
“ದೇಶದಲ್ಲಿ ನಡೆಯುತ್ತಿರುವ ಬಯೋತ್ಪಾದನೆ ಮತ್ತು ಅತಂಕಕಾರಿಗಳನ್ನು ಹೋಗಲಾಡಿಸಲು ಮತ್ತು ಒಳಿತಿಗಾಗಿ ಪ್ರತಿ ದೇವಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡ ಬೇಕು” -ಮೋಹನದಾಸ ಸ್ವಾಮೀಜಿ
“ಕಾರ‍್ಯಕ್ರಮ ಉತ್ತಮ ಮತ್ತು ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರವೇ ಕಾರಣ” – ಬಾಲಕೃಷ್ಣ ಪುತ್ಯ
“ಭಜನೆ ದೇವರ ಕಾಣಲು ನಮ್ಮ ಪೂರ್ವಜರು ನೀಡಿರುವ ದಿವ್ಯ ಸಾಧನ.ಅದು ವೈಜ್ಞಾನಿಕವಾಗಿ ದೇಹದ ಆರೋಗ್ಯಕ್ಕೆ ಪೂರಕವಾಗಿದೆ.”-ನೇಮಿರಾಜ ಪಲ್ಲೋಡಿ.
“ಮಕ್ಕಳು ಏಳು ದಿನಗಳ್ಲಿ ಇಷ್ಟೊಂದು ತರಬೇತಿಯ ಯಶಸ್ವಿ ಕಾಣಲು ಸಂಘಟಕರು ಮತ್ತು ತರಬೇತುದಾರು ಕಾರಣ”-ಲೋಕೇಶ್ ಬರೆಮೇಲು
“ಪಂಜ ಪಂಚಲಿಂಗೇಶ್ವರ ದೇವಳದಲ್ಲಿ ಈ ವರುಷ ಭಜನೋತ್ಸವವು ಜರುಗಲಿದೆ ಎಲ್ಲರ ಸಂಪೂರ್ಣ ಸಹಕಾರ ಬೇಕು.”- ಸಂತೋಷ್ ಕುಮಾರ್ ರೈ.
ಉದ್ಘಾಟನೆ: ಎ..೨೨.ರಂದು ಕಾರ‍್ಯಕ್ರಮವನ್ನು ತೊಂಡಚ್ಚನ್ ಇಂಡಸ್ಟ್ರಿಸ್ ಮಾಲಕ ಮನು ಎಂ ಉದ್ಘಾಟಿಸಿದರು. ಶ್ರೀ ಶಾರದಾಂಬಾ ಭಜನಾ ಮಂಡಳಿ ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಆರಾಧನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, , ಪಂಜ ವಲಯದ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವಲಯ ಮೇಲ್ವಿಚಾರಕಿ ಭಾಗೀರಥಿ, ಕೂತ್ಕುಂಜ ಒಕ್ಕೂಟದ ಅಧ್ಯಕ್ಷ , ವಿಶ್ವನಾಥ ಸಂಪ, ವನಿತಾ ಸಮಾಜದ ಕಾರ್ಯದರ್ಶಿ ಹೇಮಲತಾ ಜನಾರ್ಧನ, ತರಬೇತುದಾರರಾದ ನಳಿನಿ ವಿ ಆಚಾರ್ಯ, ಶೃದ್ಧಾಲಕ್ಷ್ಮೀ ಕೆಮ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಲೋಕೇಶ್ ಬರೆಮೇಲು ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕರಿ ನಿರೂಪಿಸಿದರು. ಜಗದೀಶ್ ಮಠ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.