ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸ್ವರ್ಣ ರಥ : 85  ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

Advt_Headding_Middle
Advt_Headding_Middle

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಂದಿನ ಆರು ತಿಂಗಳಲ್ಲಿ ೮೫ ಕೋಟಿ ರೂ ವೆಚ್ಚದಲ್ಲಿ ಚಿನ್ನದ ರಥ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಎ.೨೭ರಂದು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಮಂಡಳಿ ಅದ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸದಸ್ಯರಿದ್ದು ಸಭೆ ನಡೆಸಲಾಗಿದ್ದು ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿದೆ.


೨೦೦೬ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯ ಮಂತ್ರಿಗಳಾಗಿದ್ದು, ನಾಗರಾಜ ಶೆಟ್ಟಿಯ ವರು ಮುಜರಾಯಿ ಸಚಿವರಾಗಿದ್ದಾಗ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಚಿನ್ನದ ರಥ ಮಾಡುವ ನಿಟ್ಟಿನಲ್ಲಿ ಸಭೆ ನಡೆಸಿ, ರೂ.೧೫ ಕೋಟಿಯಿಂದ ರಥ ನಿರ್ಮಾಣ ಮಾಡಲು ಸರಕಾರ ಆದೇಶ ಆಗಿತ್ತು. ಚಿನ್ನದ ರಥ ನಿರ್ಮಾಣ ಕಾರ್ಯವನ್ನು ಕೋಟೇಶ್ವರದ ಲಕ್ಷ್ಮೀ ನಾರಾಯಣ ಆಚಾರ್ಯರಿಗೆ ವಹಿಸಲಾಗಿತ್ತು. ರಥ ನಿರ್ಮಾಣದ ಕೆಲಸ ಆರಂಭಗೊಂಡು ಅಂತಿಮ ಹಂತಕ್ಕೆ ತಲುಪುವ ವೇಳೆಗೆ ಚಿನ್ನದ ದರದಲ್ಲಿ ವ್ಯತ್ಯಾಸ ಉಂಟಾಗಿ ಬಳಿಕ ಆ ಕೆಲಸ ಅಲ್ಲಿಗೆ ನಿಂತಿತು. ಹಾಗೆ ನಿರ್ಮಾಣಗೊಂಡ ರಥ ಈಗಲೂ ಸುಬ್ರಹ್ಮಣ್ಯದಲ್ಲಿದೆ.

ಮರುಜೀವ : ಇದೀಗ ಅಂದು ಕೈಗೊಂಡ ಚಿನ್ನದ ರಥ ನಿರ್ಮಾಣ ಕಾರ್ಯಕ್ಕೆ ಇದೀಗ ಮತ್ತೆ ಕುಮಾರಸ್ವಾಮಿ ನೆತೃತ್ವದಲ್ಲೇ ಮರು ಜೀವ ದೊರೆತಿದ್ದು, ಎ.೨೭ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯವರನ್ನು ಬೆಂಗಳೂರಿಗೆ ಕರೆಸಿಕೊಂಡ ಮುಖ್ಯಮಂತ್ರಿಯವರು ಈ ಕುರಿತು ಸಭೆ ನಡೆಸಿದರು. ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿಯವರು ಈಗ ಚಿನ್ನದ ರಥಕ್ಕೆ ತಗಲಬಹುದಾದ ವೆಚ್ಚ, ದೇವಸ್ಥಾನದ ಆದಾಯದ ಕುರಿತು ಮತ್ತಿತರ ವಿಚಾರದಲ್ಲಿ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಕುಕ್ಕೆ ಸುಬ್ರಹ,ಣ್ಯ ದೇ ಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ರವೀಂದ್ರ, ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಮಾಧವ ದೇವರಗದ್ದೆ, ಶಿವರಾಮ ರೈ, ಕೆ.ಆರ್.ಶೆಟ್ಟಿಗಾರ್, ಹಾಗೂ ಇಂಜಿನಿಯರ್‌ರವರು ತೆರಳಿದ್ದರು.

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಬ್ರಹ್ಮ ರಥ ನಿರ್ಮಾಣ ಕೆಲಸ ಈಗಾಗಲೇ ಕೊಟೇಶ್ವರದಲ್ಲಿ ಸುಮಾರು ಎರಡರಿಂದ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ.


೧೩ ವರ್ಷಗಳ ಹಿಂದೆ ೧೫ ಕೋಟಿ
ಈಗ ೮೫ ಕೋಟಿ ರೂ. ವೆಚ್ಚ
೨೦೦೬ರಲ್ಲಿ ಸ್ವರ್ಣ  ರಥದ ನಿರ್ಮಾಣದ ಯೊಚನೆ
ಬಂದಾಗ ರೂ.೧೫ ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿತ್ತು. ಆಗ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ೬೦೦ ರಿಂದ ೮೦೦ ರೂ ಇತ್ತು. ಆದರೆ ಅದೇ ಸಮಯದಲ್ಲಿ ಚಿನ್ನದ ದರದಲ್ಲಿ ಆಗಿರುವ ವ್ಯತ್ಯಾಸದಿಂದ ರಥ ನಿರ್ಮಾಣ ಕಾರ್ಯ ನಿಂತಿತ್ತು. ಇದೀಗ ಚಿನ್ನಕ್ಕೆ ಗ್ರಾಂ ಒಂದಕ್ಕೆ ರೂ.೨೮೦೦ ರಿಂದ ೩೦೦೦ ರೂ ಆಗಿರುವುದರಿಂದ ಸುಮಾರು ೮೫ ಕೋಟಿ ವೆಚ್ಚ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಈ ಕುರಿತು ಎ.೨೯ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ರಥ ನಿರ್ಮಾಣ ಮತ್ತು ಅದಕ್ಕೆ ತಗಲು ವೆಚ್ಚದ ಬಗ್ಗೆ ಎಸ್ಟಿಮೇಟ್ ತಯಾರಿಕೆ ನಡೆಯಲಿದೆ.

ಸ್ವರ್ಣ ರಥ ನಿರ್ಮಾಣ ನಮ್ಮ ಯೋಗ : ಅಧ್ಯಕ್ಷ ನಿತ್ಯಾನಂದ ಮುಂಡೋಡಿ
“ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ರಥ ನಿರ್ಮಾಣ ಮಾಡುವುದು ನಮ್ಮ ಸೌಭಾಗ್ಯ`’ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದ ಸಭೆ ಬಳಿಕ ಸುದ್ದಿಯೊಂದಿಗೆ ಅಭಿಪ್ರಾಯ ಹಂಚಿಕೊಂಡ ಮುಂಡೋಡಿಯವರು, ‘`೨೦೦೬ರಲ್ಲೆ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆಗ ಚಿನ್ನದ ದರದಲ್ಲಾದ ವ್ಯತ್ಯಾಸದಿಂದ ಇದು ನಿಂತಿತ್ತು. ಇದೀಗ ಮತ್ತೆ ನಮ್ಮ ಅವಧಿಯಲ್ಲಿ ರಥ ನಿರ್ಮಾಣದ ಕೆಲಸಕ್ಕೆ ಚಾಲನೆ ಸಿಗುತ್ತಿದೆ. ನೂತನ ಬ್ರಹ್ಮರಥ ನಿರ್ಮಾಣದ ಜವಾಬ್ದಾರಿ ಸಿಕ್ಕಿದ ನಮಗೆ ಅದೃಷ್ಠ. ಚಿನ್ನದ ರಥದ ಚಾಲನೆ ಸಿಗುವುದು ನಮ್ಮ ಯೋಗ ಎಂದು ಹೇಳಿದ ಅವರು, ಮುಖ್ಯಮಂತ್ರಿಗಳು ಸಭೆ ನಡೆಸಿ ರಥಕ್ಕೆ ತಗಲು ವೆಚ್ಚ ಮತ್ತು ದೇವಸ್ಥಾನದಲ್ಲಿ ಇರುವ ಹಣದ ಕುರಿತು ವಿವರ ಪಡೆದುಕೊಂಡಿದ್ದಾರೆ. ಎ.೨೯ರಂದು ನಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಭೆ ನಡೆಯಲಿದ್ದು ಅಲ್ಲಿ ರೂಪುರೇಷೆ ತಯಾರಾಗಲಿದೆ“ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.