ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ?

Advt_Headding_Middle
Advt_Headding_Middle

ದಿನವಿಡಿ ದುಡಿದು ಬಂದು ರಾತ್ರಿ ಊಟದ ಬಳಿಕ ನಾವು ನಿದ್ರೆಗೆ ಜಾರುವುದು ಸಹಜ ಕ್ರಿಯೆ. ಇದು ಪ್ರತಿಯೊಬ್ಬ ಮನುಷ್ಯನು ಪಾಲಿಸಿಕೊಂಡು ಹೋಗುವಂತಹ ಕ್ರಮ. ದಣಿದಿರುವಂತಹ ದೇಹಕ್ಕೆ ಆರಾಮ ಸಿಗಬೇಕಾದರೆ ಆಗ ನಾವು ರಾತ್ರಿ ವೇಳೆ ನಿದ್ರಿಸಲೇಬೇಕು. ಆದರೆ ನಿದ್ರೆಯಿಂದ ಎದ್ದು ಬೆಳಗ್ಗೆ ಮೊದಲು ಮಾಡಬೇಕಾದ ಕೆಲಸ ಯಾವುದು ಎನ್ನುವಂತಹ ಪ್ರಶ್ನೆಯು ನಿಮ್ಮನ್ನು ಹಲವಾರು ಸಲ ಕಾಡಿರಬಹುದು. ಒಬ್ಬೊಬ್ಬರು ಒಂದೊಂದು ರೀತಿಯ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ಕೆಲವರು ಶೌಚಾಲಯಕ್ಕೆ ಹೋಗಬಹುದು, ಇನ್ನು ಕೆಲವರು ಹಲ್ಲುಜ್ಜಬಹುದು, ಮತ್ತೆ ಕೆಲವರು ನೇರವಾಗಿ ಚಹಾ ಅಥವಾ ಕಾಫಿ ಹೀರಬಹುದು.

ಆದರೆ ನಾವು ಬೆಳಗ್ಗೆ ಎದ್ದು ಮಾಡಬೇಕಾದ ಮೊದಲ ಕೆಲಸ ಎಂದರೆ ಅದು ಒಂದು ಲೋಟ ನೀರು ಕುಡಿಯುವುದು. ಹೀಗೆ ಮಾಡಿದರೆ ಆಗ ಸುಮಾರು ಎಂಟು ಗಂಟೆಗಳ ಕಾಲ ಆರಾಮ ಪಡೆದಿದ್ದ ದೇಹಕ್ಕೆ ಬೇಕಾಗುವಂತಹ ತೇವಾಂಶವು ಸಿಗುವುದು.ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿದರೆ ಅದರಿಂದ ಸಿಗುವಂತಹ ಲಾಭಗಳು ಏನು ಎಂದು ನಾವು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ನಿಮ್ಮ ದಿನಕ್ಕೆ ಪರಿಪೂರ್ಣ ಆರಂಭ ನೀಡುವುದುದಿನದ ಆರಂಭವು ಒಳ್ಳೆಯದು ಆಗಿದ್ದರೆ ಆಗ ಸಂಪೂರ್ಣ ದಿನವು ಉತ್ತಮವಾಗಿರುವುದು ಎಂದು ಹೆಚ್ಚಿನವರು ನಂಬಿದ್ದಾರೆ. ಹೀಗೆ ಮಾಡಬೇಕಾದರೆ ನೀವು ಏನು ಮಾಡಬೇಕು ಎಂದರೆ ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ದಿನದ ಆರಂಭವನ್ನು ಉತ್ತಮ ವಾಗಿಸುವುದು.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ದುಗ್ಧರಸ

ದುಗ್ಧರಸವು ನಮ್ಮ ದೇಹದಲ್ಲಿ ತುಂಬಾ ಪ್ರಾಮುಖ್ಯ ಪಾತ್ರ ನಿರ್ವಹಿಸುವುದು. ಇದು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಮತ್ತು ಇತರ ಕೆಲವು ನಿತ್ಯದ ಕಾರ್ಯಗಳನ್ನು ಇದು ಮಾಡುವುದು. ದುಗ್ದರಸದ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತಲಿದ್ದರೆ ಆಗ ನಿಮಗೆ ಸೋಂಕಿನ ವಿರುದ್ಧ ಹೋರಾಡಲು ತುಂಬಾ ಶಕ್ತಿ ಬರುವುದು. ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದಾಗಿ ದುಗ್ದರಸ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಮತ್ತು ಇದು ದ್ರವದ ಸಮತೋಲನವನ್ನು ಸುಧಾರಣೆ ಮಾಡುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ಚರ್ಮ

ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಲು ನೀರು ನೆರವಾಗುವುದು. ಇದರಿಂದಾಗಿ ಚರ್ಮವು ತುಂಬಾ ಕಾಂತಿಯುತ ಹಾಗೂ ಆರೋಗ್ಯವಾಗಿ ಇರುವುದು. ಬೆಳಗ್ಗೆ ಎದ್ದ ಬಳಿಕ ನೀವು ಒಂದು ಲೋಟ ನೀರು ಕುಡಿಯಿರಿ. ಇದರಿಂದ ದೇಹಕ್ಕೆ ತೇವಾಂಶ ಸಿಗುವುದು ಮತ್ತು ದೇಹವನ್ನು ನಿರ್ವಿಷಗೊಳಿಸಲು ಇದು ನೆರವಾಗುವುದು. ಈ ವಿಧಾನ ಅಳವಡಿಸಿಕೊಂಡರೆ ಆಗ ಚರ್ಮವು ಕಾಂತಿ ಹಾಗೂ ಆರೋಗ್ಯವಾಗಿ ಇರುವುದು.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ತೂಕ ಇಳಿಸಿಕೊಳ್ಳಲು

ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದರೆ ಆಗ ನೀವು ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯಬೇಕು. ಅರ್ಧ ಲೀಟರ್ ನಷ್ಟು ತಣ್ಣಗಿನ ನೀರನ್ನು ನೀವು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಕುಡಿದರೆ ಅದರಿಂದ ತೂಕ ಇಳಿಸುವ ನಿಮ್ಮ ಕಾರ್ಯಕ್ಕೆ ಶೇ. 24ರಷ್ಟು ನೆರವಾಗುವುದು.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ಸರಿಪಡಿಸಲು ಉತ್ತಮ

ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವ ಕಾರಣದಿಂದಾಗಿ ದೇಹವು ಹೆಚ್ಚು ಹೊಸ ರಕ್ತ ಮತ್ತು ಸ್ನಾಯುಗಳ ಕೋಶವನ್ನು ಉತ್ಪತ್ತಿ ಮಾಡಲು ನೆರವಾಗುವುದು. ಇದರಿಂದ ನೀವು ಆರೋಗ್ಯವಾಗಿ ಇರಬಹುದು ಮತ್ತು ಯೌವನಯುತವಾಗಿ ಕಾಣುವಿರಿ. ಪ್ರತಿನಿತ್ಯ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಅದರಲ್ಲೂ ಬೆಳಗ್ಗೆ ಎದ್ದ ಕೂಡಲೇ.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ಕರುಳನ್ನು ಶುದ್ಧೀಕರಿಸುವುದು

ಬೆಳಗ್ಗೆ ಎದ್ದ ವೇಳೆ ನಿಮ್ಮ ಹೊಟ್ಟೆಯು ಖಾಲಿಯಾಗಿ ಇರುವುದು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ಅದರಿಂದ ಕರುಳುಗಳು ಶುದ್ಧವಾಗುವುದು. ಇದರಿಂದ ನೀವು ದಿನದಲ್ಲಿ ಯಾವುದೇ ರೀತಿಯ ಆಹಾರ ತಿಂದರೂ ಅದರ ಪೋಷಕಾಂಶಗಳನ್ನು ಹೀರಿಕೊಳ್ಳಲು ಕರುಳಿಗೆ ನೆರವಾಗುವುದು. ಖಾಲಿ ಹೊಟ್ಟೆಯಲ್ಲಿ 500 ಮಿ.ಲೀ. ನೀರು ಕುಡಿಯಿರಿ.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ಸಾಕಷ್ಟು ನೀರು ಕುಡಿಯಿರಿ

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಅದಾಗ್ಯೂ, ಇದಕ್ಕಾಗಿ ನೀವು ಬೆಳಗ್ಗೆ ಎದ್ದ ಬಳಿಕ 400 ಮಿ.ಲೀ.ನಿಂದ 600 ಮಿ.ಲೀ. ನೀರು ಕುಡಿಯಬೇಕು. ಇನ್ನೊಂದು ಕಡೆ ಅತಿಯಾಗಿ ನೀರು ಕುಡಿದರೆ ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯಬೇಕಂತೆ, ಯಾಕೆ ಗೊತ್ತೇ? ನೀವು ತಿಳಿಯಲೇಬೇಕಾದ ಸಂಗತಿಗಳು 
ಇಂದೇ ಆರಂಭಿಸಿ

ನೀವು ಬೆಳಗ್ಗೆ ಎದ್ದ ಬಳಿಕ ಹಲ್ಲುಜ್ಜಿ ಮತ್ತು ಬೆಳಗ್ಗಿನ ನಿತ್ಯಕರ್ಮಗಳನ್ನು ಪೂರೈಸಿಕೊಳ್ಳೀ. ಇದರ ಬಳಿಕ ನೀವು ಶುದ್ಧವಾಗಿರುವ ನೀರನ್ನು ಕುಡಿಯಿರಿ. ಸುಮಾರು 500 ಮಿ.ಲೀ.ನಷ್ಟು ನೀರನ್ನು ನೀವು ಕುಡಿಯಿರಿ. ಒಂದು ಬಾಟಲಿ ಅಥವಾ ಜಗ್ ನಲ್ಲಿ ನೀರು ಹಾಕಿಡಿ. ಲೋಟ ತೆಗೆದುಕೊಂಡು ಅದನ್ನು ಕುಡಿಯಿರಿ. ನಿಮಗೆ ಮೊದಲಿಗೆ ತುಂಬಾ ನೀರು ಕುಡಿಯಲು ಕಷ್ಟವಾಗುತ್ತಲಿದ್ದರೆ, ಆಗ ನೀವು ದಿನದಿಂದ ದಿನಕ್ಕೆ ಇದನ್ನು ಹೆಚ್ಚಿಸುತ್ತಾ ಹೋಗಿ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.