Breaking News

ಮೇ 9 ರಿಂದ 12 : ಕಲ್ಲಗದ್ದೆ – ಮೂರ್ಜೆ ಕುಟುಂಬದ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಕಲ್ಲಗದ್ದೆ- ಮೂರ್ಜೆ ಕುಟುಂಬದ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಮೇ.9 ರಿಂದ ಮೇ 12 ರವರೆಗೆ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಮೇ.9 ರಂದು ಸಂಜೆ ಗಂಟೆ 5.00 ಕ್ಕೆ ತಂತ್ರಿಗಳ ಆಗಮನ, ಸಂಜೆ ಗಂಟೆ 6.00 ಕ್ಕೆ ಪುಣ್ಯಾಹವಾಚನ,ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ,ವಾಸ್ತುಹೋಮ, ವಾಸ್ತುಬಲಿ, ವಾಸ್ತುಪುಣ್ಯಾಹಾಂತ ನಡೆಯಲಿದೆ.

ರಾತ್ರಿ ಗಂಟೆ 10.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಮೇ.10 ಕ್ಕೆ ಬೆಳಿಗ್ಗೆ 6.30 ಕ್ಕೆ ಗಣಪತಿ ಹೋಮ,ಬ್ರಹ್ಮಕಲಶ ಪೂಜೆ ನಡೆಯಲಿದೆ.ಪೂರ್ವಾಹ್ನ ಗಂಟೆ 9.00 ಕ್ಕೆ ಮಿಥುನ ಲಗ್ನದ ಸುಮೂರ್ತದಲ್ಲಿ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ,ಮಹಾಪೂಜೆ,ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮೇ.11 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಗಣಪತಿ ಹೋಮ,ನಾಗಂಬಿಲ ನಡೆಯಲಿದೆ.
ಬೆಳಿಗ್ಗೆ ಗಂಟೆ 10.00 ಕ್ಕೆ ಶ್ರೀ ವೆಂಕಟರಮಣ ದೇವರ ಹರಿಸೇವೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 6.00 ಕ್ಕೆ ಶ್ರೀ ಧರ್ಮದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಗಂಟೆ 9.00 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಗಂಟೆ 10.00ರಿಂದ ದೈವಗಳ ನೇಮೋತ್ಸವ ನಡೆಯಲಿದೆ.

ಮೇ 12 ರಂದು ಬೆಳಿಗ್ಗೆ ಗಂಟೆ 6.00 ಕ್ಕೆ ಧರ್ಮದೈವ ಶ್ರೀ ರುದ್ರಚಾಮುಂಡಿ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆ ನಡೆದ ಬಳಿಕ ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮೂರ್ಜೆ – ದರ್ಖಾಸ್ತು ಕುಟುಂಬದ ಹಿರಿಯರಾದ ಮೋನಪ್ಪ ಗೌಡ ಮತ್ತು ಮೂರ್ಜೆ – ಕಲ್ಲಗದ್ದೆ ತರವಾಡು ಮನೆಯ ತಿಮ್ಮಪ್ಪ ಗೌಡರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.