ವಿದ್ಯಾರಶ್ಮಿಗೆ 10 ನೆ ತರಗತಿಯಲ್ಲಿ 98 % ಫಲಿತಾಂಶ

Advt_Headding_Middle
Advt_Headding_Middle

2019 ನೆ ಮಾರ್ಚ್‌ನಲ್ಲಿ ನಡೆದ ಹತ್ತನೆ ತರಗತಿಯ ಪರೀಕ್ಷೆಗೆ ಸವಣೂರಿನ ವಿದ್ಯಾರಶ್ಮಿಯಿಂದ ಹಾಜರಾದ 29  ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ 98 % ಫಲಿತಾಂಶ ದಾಖಲಾಗಿದೆ. ಈ ಪೈಕಿ 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.


ಶ್ರೀಶ ಯು., ಬಿನ್ ಶ್ರೀನಿವಾಸ್ ಮತ್ತು ಚಂದ್ರಕಲಾ, ಉಳವ ಮನೆ, ಕಾಮಣ ಗ್ರಾಮ, ಪುತ್ತೂರು ಇವರು 599 (95.84%) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ರಾಮಶ್ರೀನಿಧಿ ಕೆ.   574 (91.84%), ಸ್ಪುರಣ್ ರೈ ಎ. , 560 (89.60%), , ಬರಡೋಲ್ ಮಹೇಶ್ ಅರವಿಂದ,  558 (89.28%), ಮೇಘನಾ ಡಿ. ರಾವ್,  551 (88.16%), ಉಮರ್ ಮಿದಿಯಾಫ್ 543 (86.88%), ಸ್ವಸ್ತಿಕ್ ಸುವರ್ಣ ಬಿ.,  535 (85.6%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರೆಲ್ಲರನ್ನು ಶಾಲಾ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.