HomePage_Banner
HomePage_Banner
HomePage_Banner
HomePage_Banner

ಕುಂಭಕ್ಕೋಡು ಮಖಾಂ ಉರೂಸ್

ಕುಂಭಕ್ಕೋಡಿ ದರ್ಗಾ ಶರೀಫ್ ನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ವಲಿಯ್ಯುತ್ತಲ್ಲಾಹಿ ಮಣವಾಟಿ ಬೀವಿ (ರ)ರವರ ಉರೂಸ್ ಕಾರ್ಯಕ್ರಮ ಮೆ.1ರಿಂದ ಮೆ.3 ರವರೆಗೆ ಕುಂಭಕ್ಕೋಡು ದರ್ಗಾ ಶರೀಫ್ ವಠಾರದಲ್ಲಿ ನಡೆಯಿತು.

ಮೆ.1ರಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಅಲ್ ಮದೀನಾ ಧ್ವಜಾರೋಹಣ ಮಾಡಿ ಉರೂಸ್ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು ಕುಂಭಕ್ಕೋಡು ಜುಮ್ಮಾ ಮಸೀದಿ ಖತೀಬರಾದ ಸಯ್ಯದ್ ಉಮ್ಮರ್ ಜಿಫ್ರಿ ಅಲ್ ಹನೀಫಿ ಖತಮಲ್ ಖುರಾನ್ ಮತ್ತು ಪಳ್ಳಿ ನೇರ್ಚೆ ಕಾರ್ಯಕ್ರಮ ಕ್ಕೆ ನೇತ್ರತ್ವ ವಹಿಸಿದ್ದರು.ಉರೂಸ್ ಸಮಾರಂಭವನ್ನು ಉದ್ಘಾಟಿಸಿದರು.


ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಏಣಾವರ ಅಧ್ಯಕ್ಷತೆ ವಹಿಸಿದ್ದರು.
ಮೆ.2 ರಂದು ನಡೆದ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಜಂಯ್ಯತ್ತುಲ್ ಉಲಮಾ ಅಧ್ಯಕ್ಷ ಸಯ್ಯದ್ ಕುಂಞಿ ಕೋಯ ತಂಙಳ್ ದುವಾಶಿರ್ವಚನ ದೊಂದಿಗೆ ಉದ್ಘಾಟಿಸಿದರು ಜಾಲ್ಸೂರು ಜುಮ್ಮಾ ಮಸೀದಿ ಮುದರಿಸ್ ಅಬೂಭಕ್ಕರ್ ಪೈಝಿ ಕುಂಬ್ಡಾಜೆ ಮುಖ್ಯ ಪ್ರಭಾಷಣ ಮಾಡಿದರು.
ಮೆ.3ಸಮಾರೋಪ
ಮೆ.3ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಬ್ರಾಹಿಂ ಹಾಜಿ ವಹಿಸಿದ್ದರು ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್ ದುವಾಶಿರ್ವಚನ ನೀಡಿದರು ಹಂಝ ಮಿಸ್ಬಾಹಿ ಒಂಟೇಪದವು ಮುಖ್ಯ ಪ್ರಭಾಷಣ ಮಾಡಿದರು ವೇದಿಕೆಯಲ್ಲಿ ನಾಸೀರ್ ಸುಖೈಪಿ,ಮಹಮೂದ್ ಹನೀಫಿ,ಶಾಫಿ ಮಿಸ್ಬಾಹಿ, ಸುಲೈಮಾನ್ ಮುಸ್ಲಿಯಾರ್, ಮುನೀರ್ ಹಿಮಮಿ,ಹಾಜಿ ಮಹಮ್ಮದ್ ಏಣಾವರ,ಹಾಜಿ ಮಹಮೂದ್ ಅಲ್ ಮದೀನಾ,ಮೊದಲಾದವರು ಉಪಸ್ಥಿತರಿದ್ದರು ಅಶ್ರಫ್ ಸಖಾಫಿ ಕುಂಭಕ್ಕೋಡು ಸ್ವಾಗತಿಸಿ, ಉರೂಸ್ ಕಮಿಟಿ ಕಾರ್ಯದರ್ಶಿ ಕೆ.ಎಂ ಝಕರಿಯ್ಯ ವಂದಿಸಿದರೂ.ಇಸ್ಮಾಯಿಲ್ ಸಹದಿ,ಸಿರಾಜುದ್ದೀನ್ ಹಿಮಾಮಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮ ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.