ಗಾಂಧಿಗೆ ಅಗೌರವ ನಳಿನ್‌ಗೆ ಬಿಜೆಪಿ ನೋಟೀಸು

Advt_Headding_Middle

ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ‘ದೇಶ ಭಕ್ತ’ ಎಂದು ಉಲ್ಲೇಖಿಸುವುದರ ಮೂಲಕ ಮಹಾತ್ಮ ಗಾಂಧಿಗೆ ಅವಮಾನ ಗೈದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್‌ರ ಹೇಳಿಕೆಯನ್ನು ಸಮರ್ಥಿ ಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ದ.ಕ.ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್‌ರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶೋಕಾಸ್ ನೋಟೀಸ್ ನೀಡಿದ್ದಾರೆ.
ಸಾಧ್ವಿ ಪ್ರಜ್ಞಾಸಿಂಗ್ ನಾಥೂರಾಂ ಗೋಡ್ಸೆಯನ್ನು ‘ದೇಶ ಭಕ್ತ’ ಎಂದು ಹೇಳುವುದರ ಮೂಲಕ ಮಹಾತ್ಮ ಗಾಂಧೀಜಿಯವರನ್ನು ಅವಮಾನಿಸಿದ್ದರು. ಅವರು ಹೇಳಿಕೆ ನೀಡಿದ ಕೂಡಲೇ ದೇಶಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗ ತೊಡಗಿದಾಗ ಸಂಸದ ನಳಿನ್ ಕುಮಾರ್ ಕಟೀಲ್ ‘ಗೋಡ್ಸೆ ಕೊಂದದ್ದು ಒಬ್ಬರನ್ನು, ಕಸಬ್ ಕೊಂದದ್ದು ೭೨ ಜನರನ್ನು, ರಾಜೀವ್ ಕೊಂದದ್ದು ೧೭ ಸಾವಿರ ಜನರನ್ನು ಯಾರು ಅತ್ಯಂತ ಕ್ರೂರಿ?`’ ಎಂದು ಟ್ವೀಟ್ ಮಾಡಿದ್ದರು.
ಗಾಂಧೀಜಿಯವರನ್ನು ಅವಮಾನಿಸಿದ ಸಾಧ್ವಿ ಪ್ರಜ್ಞಾ ಹೇಳಿಕೆ ದೇಶದಲ್ಲಿ ತಲ್ಲಣ ಸೃಷ್ಠಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಯವರು ಕಟು ಶಬ್ದಗಳಲ್ಲಿ ಸಾಧ್ವಿಯವರನ್ನು ಖಂಡಿಸಿದರಲ್ಲದೆ, “ಪ್ರಜ್ಞಾಸಿಂಗ್‌ರನ್ನು ತಾನೆಂದೂ ಕ್ಷಮಿಸುವುದಿಲ್ಲ`’ ಎಂದು ಹೇಳಿಕೆ ನೀಡಿದರು. ಪ್ರಜ್ಞಾ ಹೇಳಿಕೆ ಸಮರ್ಥಿಸಿ ಮಧ್ಯಪ್ರದೇಶದ ಬಿಜೆಪಿ ವಕ್ತಾರರೊಬ್ಬರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದನ್ನು ತಿಳಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಹುದ್ದೆಯಿಂದ ವಜಾ ಮಾಡಿದರು. ಇಷ್ಟು ಆಗುವ ಮೊದಲೇ ನಳಿನ್ ಕುಮಾರ್ ಕಟೀಲ್ ಮತ್ತು ಮಂತ್ರಿ ಅನಂತ್ ಕುಮಾರ್ ಹೆಗಡೆ ತಮ್ಮ ಅಭಿಪ್ರಾಯವನ್ನು ಟ್ವಿಟರ್‌ನಲ್ಲಿ ಹಾಕಿ ಆಗಿತ್ತು. ಮೋದಿ ಕೆಂಡಾಮಂಡಲವಾದ ಸುದ್ದಿ ತಿಳಿದ ಕೂಡಲೇ ಅವರಿಬ್ಬರೂ ತಮ್ಮ ಟ್ವೀಟ್‌ಗಳನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದರು. ಆದರೆ ಅಮಿತ್ ಶಾರವರು ನಳಿನ್ ಹಾಗೂ ಹೆಗಡೆಯವರಿಗೆ ನೋಟೀಸು ಜಾರಿ ಮಾಡಿದ್ದು, ಆ ರೀತಿ ಟ್ವೀಟ್ ಮಾಡಿದ್ದಕ್ಕೆ ೧೦ ದಿನಗಳೊಳಗೆ ಉತ್ತರ ನೀಡಬೇಕೆಂದು’ ಸೂಚಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.