HomePage_Banner
HomePage_Banner

ಕೆ.ವಿ.ಜಿ.ಐ.ಪಿ.ಎಸ್‌ನಲ್ಲಿ ವನಮಹೋತ್ಸವ ಕಾರ್ಯಕ್ರಮ

ಕೇಂದ್ರೀಯ ಪಠ್ಯಕ್ರಮದಡಿಯಲ್ಲಿ ಸಿ.ಬಿ.ಎಸ್.ಇ. ಶಿಕ್ಷಣ ನೀಡುತ್ತಿರುವ ಸುಳ್ಯದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ಜೂ.8ರಂದು ಜರುಗಿತು. ಶಾಲಾ ಪ್ರಾಚಾರ್ಯರಾದ ಸುನಿಲ್ ಕುಮಾರ್.ಕೆ.ಸಿ ಅವರು ಹಸಿರು ನಮ್ಮ ಉಸಿರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ನಾವೆಲ್ಲರೂ ನಮ್ಮ ನಮ್ಮ ಪರಿಸರದಲ್ಲಿ ಗಿಡನೆಟ್ಟು ಬೆಳೆಸೋಣ ಎಂದು ತಿಳಿಸುತ್ತಾ ಹಸಿರಿನ ಅಗತ್ಯ ಹಾಗೂ ಮಹತ್ವವನ್ನು ಮಕ್ಕಳಿಗೆ ವಿವರಿಸಿ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಂದ ಹಸಿರು ಪರಿಸರವನ್ನು ಉಳಿಸುವ ಕಾಳಜಿಯುಳ್ಳ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬಂದವು. ಉಪಪ್ರಾಚಾರ್ಯೆ ಶಿಲ್ಪಾ ಬಿದ್ದಪ್ಪ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿದ್ಯಾರಾವ್, ಆಡಳಿತಾತ್ಮಕ ಸಂಯೋಜಕಿ ಸುಜಾತಾ.ಕೆ, ಮಾನವಿಕ ವಿಭಾಗದ ಮುಖ್ಯಸ್ಥೆ ಗೀತಾಂಜಲಿ.ಟಿ.ಜಿ ಹಾಗೂ ಎಲ್ಲ ಅಧ್ಯಾಪಕ ವೃಂದದವರೂ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.