HomePage_Banner
HomePage_Banner

ತಾ.ಪಂ. ಸಭೆಗೆ ಅಧಿಕಾರಿಗಳ ಗೈರು : ಸದಸ್ಯರಿಂದ ತರಾಟೆ

ಸುಳ್ಯ ತಾ.ಪಂ. ಸಭೆಗೆ ಕೆಲವು ಅಧಿಕಾರಿಗಳು ಬಾರದಿರುವ ಕುರಿತು ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲಿ ಇಲಾಖಾ ಅಧಿಕಾರಿಗಳು ಬಾರದ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ಅಶೋಕ್ ನೆಕ್ರಾಜೆ, ಜನಸಾಮಾನ್ಯರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೆ. ಈ ಸಭೆಗೆ ಅಧಿಕಾರಿಗಳು ಬಾರದ ಹಿನ್ನಲೆಯಲ್ಲಿ ಸಭೆಯನ್ನು ನಡೆಸುವುದು ಬೇಡ. ರದ್ದು ಪಡಿಸಿ ಎಂದು ಆಗ್ರಹಿಸಿದಾಗ, ಸಭೆಗೆ ಬಂದ ಅಧಿಕಾರಿಗಳಲ್ಲಿ ಸಮಸ್ಯೆಗಳನ್ನು ಚರ್ಚಿಸೋಣ, ರದ್ದು ಪಡಿಸುವುದು ಬೇಡ ಎಂದು ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ ಸಲಹೆ ನೀಡಿದರು. ಬಳಿಕ ಸಭೆಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವುದಾಗಿ, ಮುಂದಿನ ಸಭೆಗಳಿಗೆ ಬಾರದೇ ಇದ್ದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.
ಕಂದಾಯ ಇಲಾಖೆಯ ಹಲವಾರು ಸಮಸ್ಯೆಗಳಿಗೆ ಉತ್ತರಿಸಲು ಸದಸ್ಯರು ಒತ್ತಾಯಿಸಿದಾಗ, ಕಂದಾಯ ಇಲಾಖೆಯಿಂದ ಬಂದವರಲ್ಲಿ ಕೆಲವು ಮಾಹಿತಿಗಳು ಇಲ್ಲದೇ ಇದ್ದಾಗ ಯಾವುದೇ ಅಧಿಕಾರಿಗಳು ಸಭೆಗೆ ಬರುವ ವೇಳೆ ಸೂಕ್ತ ಮಾಹಿತಿಯೊಂದಿಗೆ ಬರಬೇಕು. ಇಲ್ಲದಿದ್ದರೆ ಸಭೆಗೆ ಬರುವ ಅಗತ್ಯತೆ ಇಲ್ಲ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯಕಲ್ತಡ್ಕ ತರಾಟೆಗೆತ್ತಿಕೊಂಡರು.
ಕಳೆದ ಮೂರು ದಿನ ಕಾಡಾನೆಗಳು ಮಂಡೆಕೋಲಿನಲ್ಲಿ ಬೀಡುಬಿಟ್ಟಿತ್ತು. ಈ ಬಗ್ಗೆ ಜನಸಾಮಾನ್ಯರು ಫೋನ್ ಮಾಡಿ ಸಮಸ್ಯೆ ಹೇಳಿಕೊಂಡರೆ, ಅವರನ್ನು ಗಧರಿಸುವ ಕೆಲಸ ಆಗುತ್ತಿದೆ ಎಂದು ಅಧ್ಯಕ್ಷ ಚನಿಯಕಲ್ತಡ್ಕ ಹೇಳಿದಾಗ, ಇಲಾಖೆಯ ಸಿಬ್ಬಂದಿಗಳು ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡುತ್ತೇನೆ ಎಂದು ಅರಣ್ಯಾಧಿಕಾರಿ ಮಂಜುನಾಥ ಹೇಳಿದರು.
ಆನೆಹಾವಳಿ ಬಗ್ಗೆ ಗಡಿಪ್ರದೇಶಗಳಾದ ದೇಲಂಪಾಡಿ ಮತ್ತು ಮಂಡೆಕೋಲಿನಲ್ಲಿ ಸ್ಥಳೀಯವಾಗಿ ಸಭೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಭೆಯ ದಿನಾಂಕವನ್ನು ತಿಳಿಸುವುದಾಗಿ ಮಂಜುನಾಥ್ ಹೇಳಿದರು.
ತಾಲೂಕು ಪಂಚಾಯಿತಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ದುಡಿಯುವ ಹೊರಗುತ್ತಿಗೆ ನೌಕರರಿಗೆ ಕೆಲವು ತಿಂಗಳಿಂದ ಸಂಬಳ ಇಲ್ಲ: ಸರಕಾರಿ ಆಸ್ಪತ್ರೆ ಡಿಗ್ರೂಫ್ ಮತ್ತು ತಾಲೂಕು ಪಂಚಾಯಿತಿ ಹೊರಗುತ್ತಿಗೆ ನೌಕರರಿಗೆ ಕೆಲವು ತೀಂಗಳಿಂದ ಸಂಬಳ ಆಗಿಲ್ಲ. ಇವರೆಲ್ಲ ಬಡತನ ದಿಂದ ಇದ್ದು, ಟೆಂಡರ್ ಮೂಲಕ ಸರಕಾರ ನೀಡಿದ ಹಣಕ್ಕೆ ದುಡಿಯುತ್ತಿದ್ದಾರೆ ಎಂದು ಸದಸ್ಯ ಅಶೋಕ್ ನೆಕ್ರಾಜೆ ಪ್ರಸ್ತಾಪಿಸಿದಾಗ, ಈ ಬಗ್ಗೆ ಚರ್ಚೆ ನಡೆದು, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಸಂಬಳ ಕೊಡಿಸುವಂತೆ ನಿರ್ಣಯ ಮಾಡಿ, ಸರಕಾರಕ್ಕೆ, ಜಿ.ಪಂ.ಗೆ ಕಳುಹಿಸುವುದಾಗಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಬಿಸಿಯೂಟದಲ್ಲಿ ಹುಳ-ಗುಗ್ಗುರು ಇರುವುದರ ಬಗ್ಗೆ, ಶಿಷ್ಟಾಚಾರ ಪಾಲನೆ ಬಗ್ಗೆ, ಶಾಲೆಗಳ ಜಾಗದ ಸರ್ವೆ ಬಗ್ಗೆ, ಕಂದಾಯ ಇಲಾಖೆ ಸಮಸ್ಯೆ, ಎಡಮಂಗಲ, ಸುಬ್ರಹ್ಮಣ್ಯ ಅಂಬೇಡ್ಕರ್ ಭವನ ಸ್ಥಳ ಮಂಜೂರಾತಿ ಬಗ್ಗೆ, ವಿದ್ಯುತ್ ಹೀಗೆ ನಾನಾ ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಗಫೂರ್, ಅಶೋಕ ನೆಕ್ರಾಜೆ, ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಆಶಾತಿಮ್ಮಪ್ಪ, ಪುಪ್ಪಾವತಿ ಬಾಳಿಲ ಮತ್ತಿತರರು ಚರ್ಚೆ ನಡೆಸಿದರು.
ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯಕಲ್ತಡ್ಕ ವಹಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶುಭದಾ ಎಸ್ ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಪ್ರಭಾರ ಇ.ಒ.ಭವಾನಿಶಂಕರ ಇದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.