HomePage_Banner
HomePage_Banner
HomePage_Banner
HomePage_Banner

ಎಂ.ಬಿ.ಸದಾಶಿವರಿಗೆ ಎಂ.ಎಲ್.ಸಿ. ಸ್ಥಾನ ನೀಡಲು ಯುವಜನ ಸಂಯುಕ್ತ ಮಂಡಳಿ ಆಗ್ರಹ – ಸರಕಾರಕ್ಕೆ ನಿಯೋಗ ಹೋಗಲು ನಿರ್ಧಾರ


ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ ಎಂ.ಬಿ.ಸದಾಶಿವರಿಗೆ ಎಂ.ಎಲ್.ಸಿ. ಸ್ಥಾನ ನೀಡಬೇಕೆಂದು ನಮ್ಮ ಆಗ್ರಹವಾಗಿದ್ದು, ಈ ಕುರಿತಂತೆ ಸರಕಾರದ ಬಳಿ ನಿಯೋಗ ಹೋಗಲು ತೀರ್ಮಾನಿಸಿದ್ದೇವೆಂದು ಯುವಜನ ಸಂಯುಕ್ತ ಮಂಡಳಿಯ ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ ಮತ್ತು ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ.
ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠೀಯ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, “ಎಂ.ಬಿ.ಸದಾಶಿವರು ಯುವಜನ ಆಂದೋಲನದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದವರು. ಅಂಕಿ ಅಂಶಗಳ ಸಹಿತ ಅಧಿಕಾರಯುತವಾಗಿ ಮಾತನಾಡಬಲ್ಲವರು. ಇಂತವರಿಗೆ ವಿಧಾನ ಪರಿಷತ್ ಸ್ಥಾನ ನೀಡಿದರೆ ಯುವಜನತೆಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಎಂ.ಎಲ್.ಸಿ. ಸ್ಥಾನ ನೀಡಬೇಕೆಂದು ಆಗ್ರಹಿಸಿ ಸರಕಾರದ ಬಳಿ ಮಂಡಳಿಯ ನಿಯೋಗ ತೆರಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಗೌರವಾಧ್ಯಕ್ಷ ಚಂದ್ರಶೇಖರ ಪನ್ನೆ, ಗೌರವ ಸಲಹೆಗಾರರಾದ ದೀಪಕ್ ಕುತ್ತಮೊಟ್ಟೆ, ಲಕ್ಷ್ಮೀನಾರಾಯಣ ಕಜೆಗದ್ದೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಜಯನಗರ, ಕೋಶಾಧಿಕಾರಿ ತೇಜಸ್ವಿ ಕಡಪಳ, ಜತೆ ಕಾರ್ಯದರ್ಶಿಗಳಾದ ವಿಜಯ ಕುಮಾರ್ ಉಬರಡ್ಕ, ಶಂಕರ ಪೆರಾಜೆ, ನಿರ್ದೇಶಕರುಗಳಾದ ದಯಾನಂದ ಕೇರ್ಪಳ, ಆರ್.ಕೆ.ಮಹಮ್ಮದ್, ಚರಣ್ ಕಾಯರ, ವಿಖ್ಯಾತ್ ಬಾರ್ಪಣೆ, ಪವನ್ ಜಿ.ಟಿ. ಪಲ್ಲತಡ್ಕ, ಶ್ರೀಮತಿ ರಶ್ಮಿ ರಜನಿಕಾಂತ್, ಶ್ರೀಮತಿ ರಾಜೀವಿ ಲಾವಂತಡ್ಕ, ಪೂರ್ವಾಧ್ಯಕ್ಷರಾದ ಪಿ.ಎಸ್.ಗಂಗಾಧರ್, ಕೆ.ಆರ್. ಪದ್ಮನಾಭ, ಹರೀಶ್ ಪೂಜಾರಿಮನೆ, ರಂಜಿತ್ ಕುಕ್ಕೆಟ್ಟಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.