HomePage_Banner
HomePage_Banner
HomePage_Banner
HomePage_Banner

ಅರಂಬೂರು ಅಪಘಾತ : ಮೃತ ಮಂಜುಳಾ ಪುತ್ರಿಯ ಮದುವೆ ನಿಗದಿಯಾಗಿತ್ತು….


ನಿನ್ನೆ ಅರಂಬೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮಂಜುಳಾ ಅವರ ಕಿರಿಯ ಪುತ್ರಿಗೆ ಮದುವೆ ನಿಗದಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮಂಜುಳಾ ಅವರು ಅಪಘಾತದಲ್ಲಿ ಮೃತಪಟ್ಟ ನಾಗೇಂದ್ರ ಅವರ ಸಹೋದರಿಯಾಗಿದ್ದು, ನಾಗೇಂದ್ರ ಅವರ ಮನೆಗೆ ಬಂದಿದ್ದರು. ನಾಗೇಂದ್ರರು ಮಗನ ಭೇಟಿಗೆ ಸುಳ್ಯಕ್ಕೆ ಬರುವ ಹಿನ್ನಲೆಯಲ್ಲಿ ಮಂಜುಳಾ ಕೂಡಾ ಜೊತೆಯಲ್ಲಿ ಬಂದಿದ್ದರು.


ಮೃತ ಮಂಜುಳಾ ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಹಿರಿಯ ಪುತ್ರಿಗೆ ವಿವಾಹವಾಗಿದ್ದು, ಕಿರಿಯ ಪುತ್ರಿಗೆ ಕೆಲ ಸಮಯದ ಹಿಂದಷ್ಟೇ ವಿವಾಹ ನಿಶ್ಚಿತಾರ್ಥ ನಡೆದಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.