HomePage_Banner
HomePage_Banner
HomePage_Banner
Breaking News

ಕೆವಿಜಿ ಆರ್ಯುವೇದ ಮಹಾವಿದ್ಯಾಲಯದಲ್ಲಿ ಆಟಿ ಮಾಸದ ವಿಶೇಷ ಚಿಕಿತ್ಸಾ ಶಿಬಿರ

ಕೆವಿಜಿ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆಟಿ ಮಾಸದ ವಿಶೇಷ ಚಿಕಿತ್ಸಾ ಶಿಬಿರವು ಜು.೧೮ ರಂದು ಉದ್ಘಾಟನೆಗೊಂಡಿತು.


ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರ ಶುಭಹಾರೈಕೆಯೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಡಾ. ಎನ್. ಎಸ್. ಶೆಟ್ಟರ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಆಟಿ ಚಿಕಿತ್ಸೆಯ ರುವಾರಿ ಡಾ.ರೋಹಿಣಿ ಡಿ ಭಾರದ್ವಜ್ ಅವರು ಈ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿ ಎಲ್ಲರೂ ಆಟಿಚಿಕಿತ್ಸೆಯ ಪ್ರಯೋಜನ ಪಡೆದುಕೊಂಡು ಆಯಾ ಸಮಯದಲ್ಲಿ ಶರೀರದ ದೋಷಗಳ ವೃಧ್ಧಿ ಮತ್ತು ಇವುಗಳನ್ನು ಸಮಸ್ಥಿತಿಯಲ್ಲಿ ಇಟ್ಟು ದೇಹಾರೋಗ್ಯ ಕಾಪಾಡುವಲ್ಲಿ ಹೇಗೆ ಸಹಕಾರಿ ಎಂಬುದನ್ನು ವಿವರಿಸಿದರು. ಕಾಲೇಜಿನ ಬೊಧಕ ಬೋಧಕೇತರ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಿರಿಯ ವೈಧ್ಯರು, ದಾದಿಯರು, ರೋಗಿಗಳ ಪಾಲಕರು, ಸಾರ್ವಜನಿಕರು ಬಾಗವಹಿಸಿದ್ದರು. ಆಟಿ ಶಿಬಿರವು ೧೮.೦೭.೨೦೧೯ ರಿಂದ ೧೭.೦೮.೨೦೧೯ರ ತನಕ ನಡೆಯಲ್ಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.