Breaking News

ಸ್ವಾಮೀಜಿ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪ್ರಕರಣ : ಗುರುಪ್ರಸಾದ್ ಪಂಜ ನಿರೀಕ್ಷಣಾ ಜಾಮೀನು ತೀರ್ಪು ಜು. 23 ಕ್ಕೆ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಸಂದೇಶ ಪೋಸ್ಟ್ ಮಾಡಿದ ಆರೋಪದಡಿ ಪ್ರತ್ಯೇಕ 3  ಕೇಸ್‌ಗೆ ಒಳಗಾಗಿರುವ ಗುರುಪ್ರಸಾದ್ ಪಂಜರವರ ಪರ ವಕೀಲ, ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಗೌಡರವರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಜುಲೈ 12 ರಂದು ಸಲ್ಲಿಸಿದ್ದ ಅರ್ಜಿಯ ಕುರಿತಾದ ತೀರ್ಪನ್ನು ನ್ಯಾಯಾಧೀಶರು ಜು. 23 ಕ್ಕೆ ಕಾಯ್ದಿರಿಸಿದ್ದಾರೆ.


ಫೇಸ್‌ಬುಕ್, ವಾಟ್ಸಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ ಕುರಿತಾಗಿ ಅವಹೇಳನ, ಅವಮಾನ, ಮಾನಹಾನಿ, ತೇಜೋವಧೆ ನಡೆಸುವ ಅಭ್ಯಾಸ ಮಾಡಿ ಹಲವಾರು ಕೇಸುಗಳಿಗೆ ಒಳಗಾಗಿರುವ ಗುರುಪ್ರಸಾದ್ ಪಂಜರವರು ಸುಬ್ರಹ್ಮಣ್ಯ ಸಂಪುಟ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ವಿರುದ್ಧವೂ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈ ಕುರಿತು ಸಂಪುಟ ನರಸಿಂಹ ಮಠದಲ್ಲಿ ಅರ್ಚಕರಾಗಿರುವ ವರುಣ್ ಕುಮಾರ್ ಎಂಬವರು ಜುಲೈ ೫ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗುರುಪ್ರಸಾದ್ ಪಂಜರವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಲೂಟಿಕೋರ ಎಂಬಿತ್ಯಾದಿಯಾಗಿ ಅವಹೇಳನಕಾರಿಯಾಗಿ ಬರೆಯುತ್ತಾ ಅವರ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ಸ್ವಾಮೀಜಿಯವರನ್ನು ಗೌರವಿಸುವ ನಮ್ಮ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ವರುಣ್ ಕುಮಾರ್‌ರವರು ದೂರಿನಲ್ಲಿ ಆರೋಪಿಸಿದ್ದರು. ಜು.೬ರಂದು ಹರೀಶ್ ಯಾನೆ ಧನಂಜಯ ಗೌಡ ಹಾಗೂ ಭಾಸ್ಕರ ಬೆಂಡೋಡಿಯವರು ಪ್ರತ್ಯಪ್ರತ್ಯೇಕವಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿ ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿಯವರನ್ನು ಅವಹೇಳನ ಮಾಡುತ್ತಿರುವ ಗುರುಪ್ರಸಾದ್ ಪಂಜರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಗುರುಪ್ರಸಾದ್ ಪಂಜರವರ ವಿರುದ್ಧ ಪ್ರತ್ಯೇಕ ಮೂರು ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ಕೂಡಲೇ ಗುರುಪ್ರಸಾದ್‌ರವರು ತಲೆ ಮರೆಸಿಕೊಂಡಿದ್ದರು. ನಂತರ ಪೊಲೀಸರು ಗುರುಪ್ರಸಾದ್‌ರವರ ಪತ್ತೆಗೆ ಬಲೆ ಬೀಸಿದ್ದರು. ಗುರುಪ್ರಸಾದ್ ಪರ ವಕೀಲರಾದ ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಗೌಡರವರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ಜುಲೈ 17ರಂದು ನಡೆದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಅಬ್ಜೆಕ್ಷನ್ ದಾಖಲಿಸಲು ಜು. ೧೯ಕ್ಕೆ ಮುಂದೂಡಲಾಗಿತ್ತು.
ಇಂದು ಮತ್ತೆ ವಿಚಾರಣೆ ನಡೆದು ಎಪಿಪಿಯವರ ವಾದವನ್ನು ದಾಖಲಿಸಲಾಯಿತು. ತೀರ್ಪನ್ನು ನ್ಯಾಯಾಧೀಶರು ಜು. 23ಕ್ಕೆ ಕಾಯ್ದಿರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.