Breaking News

ಬೂಡು ಅಂಗನವಾಡಿ ಕಾರ್ಯಕರ್ತೆ ಸುಮತಿ ಪಿ.ಯವರಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

ಬೂಡು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಮತಿ ಪಿ.ಯವರು ತಮ್ಮ ಸೇವೆಯಿಂದ ಜೂ.30ರಂದು ನಿವೃತ್ತಿ ಹೊಂದಿದ್ದು, ಅವರನ್ನು ಜು.15ರಂದು ಬಾಲವಿಕಾಸ ಬೂಡು, ಅಂಗನವಾಡಿ ಸಮಿತಿ ಬೂಡು, ಭಗವತಿ ಯುವಸೇವಾ ಸಂಘ ಬೂಡು, ಕೇರ್ಪಳ, ಕುರುಂಜಿಗುಡ್ಡೆ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಮತ್ತು ಊರವರ ಸಹಭಾಗಿತ್ವದಲ್ಲಿ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಶ್ರೀಮತಿ ಮಂಜುಳಾ ಹಾಗೂ ಶ್ರೀಮತಿ ಜಯಶ್ರೀಯವರು ಪ್ರಾರ್ಥಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸೋಮಣ್ಣ ಮಾಸ್ತರ್ ಬೂಡು ವಹಿಸಿದ್ದರು. ಕುಸುಮಾಧರ ರೈ ಬೂಡುರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಮುಖ್ಯ ಅತಿಥಿಗಳಾಗಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ಹರೀಶ್‌ರವರು ಉಪಸ್ಥಿತರಿದ್ದರು.

ನಿವೃತ್ತರನ್ನು ನೆನಪಿನ ಕಾಣಿಕೆ, ಸನ್ಮಾನ ಪತ್ರ ಹಾಗೂ ಫಲಪುಷ್ಪದೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತರ ಪತಿ ಪಟ್ಟಾಭಿರಾಮ್, ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಮತಿ ಸರಸ್ವತಿ, ಮೇಲ್ವಿಚಾರಕಿ ಶ್ರೀಮತಿ ಶೈಲಜ, ನ.ಪಂ.ಸದಸ್ಯರುಗಳಾದ ರಿಯಾಜ್ ಕಟ್ಟೆಕ್ಕಾರ್,ಎಂ.ವೆಂಕಪ್ಪ ಗೌಡ, ವಕೀಲರ ಸಂಘದ ಅಧ್ಯಕ್ಷರಾದ ಭಾಸ್ಕರ್ ರಾವ್, ನ.ಪಂ.ಮಾಜಿ ಸದಸ್ಯರಾದ ಗೋಪಾಲ ಎಸ್.ನಡುಬೈಲು, ಬಾಲವಿಕಾಸ ಸಮಿತಿ ಸದಸ್ಯ ಸಂಜೀವ ಆಚಾರ್ಯ, ಆರೋಗ್ಯ ಸಹಾಯಕಿ ಶ್ರೀಮತಿ ನವ್ಯ, ಮಧುಸೂದನ್ ಬೂಡು, ಶ್ರೀಮತಿ ಶೋಭಾ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.