HomePage_Banner
HomePage_Banner
HomePage_Banner

ಎಲಿಮಲೆ : ಕೆರೆಗೆ ಬಿದ್ದು ಮೃತ್ಯು

ಎಲಿಮಲೆ ಮೈತ್ತಡ್ಕ ರಫೀಕ್‌ರವರ ಸಹೋದರಿ ಆಯಿಶಾರವರ ಪತಿ ಅಕ್ಮಲ್ ಎಂಬವರು ಮನೆಯ ಸಮೀಪವಿರುವ ಕೆರೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ನಿನ್ನೆ ಸಂಜೆ ಸಂಭವಿಸಿದೆ.

ಮನೆಯ ಸಮೀಪದಲ್ಲಿರುವ ಕೆರೆಗೆ ಅಳವಡಿಸಿದ್ದ ಪಂಪ್ ಸರಿಪಡಿಸುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುತ್ತಾರೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಕಲೇಶಪುರಕ್ಕೆ ಕೊಂಡೊಯ್ಯಲಾಗಿದೆ.
ಅಕ್ಮಲ್‌ರವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮದವರಾಗಿದ್ದು, ಪ್ರಸ್ತುತ ಎಲಿಮಲೆಯ ಮಿತ್ತಡ್ಕದ ವಿಕಲಚೇತನ ರಫೀಕ್‌ರವರ ಮನೆಯಲ್ಲಿ ಪತ್ನಿ ಸಮೇತರಾಗಿ ವಾಸಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.