ಜು. 28 : ಪಂಜದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಲಿ ಆಟಿಗೌಜಿ

Advt_Headding_Middle
Advt_Headding_Middle
Advt_Headding_Middle

 

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ, ಗೌಡರ ಯುವ ಸೇವಾ ಸಂಘ ಸುಳ್ಯ, ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಲಿ ಆಟಿಗೌಜಿ ೨೦೧೯ ಕಾರ್ಯಕ್ರಮವು ಜು. 28 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ ನೆರವೇರಿಸಲಿದ್ದಾರೆ. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಲಿದ್ದಾರೆ. ಸ.ಪ.ಪೂ.ಕಾಲೇಜು ಕಾರ‍್ಯ ಇದರ ಉಪನ್ಯಾಸಕ ದೊಡ್ಡರವಲಿಂಜೆ ಮುಖ್ಯ ಭಾಷಣಕಾರರಾಗಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಎಸ್.ಎನ್.ಮನ್ಮಥ, ತಾ.ಪಂ. ಸದಸ್ಯ ಅಬ್ದುಲ್ ಗಫೂರ್, ಪಂಜ ಗ್ರಾ.ಪಂ. ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ನಿವೃತ್ತ ಶಿಕ್ಷಕಿ ಶ್ರೀಮತಿ ಗಿರಿಜ ಕೆದಿಲ ಉಪಸ್ಥಿತರಿರುವರು. ನಂತರ ಮೊಗ್ರ ಜಾನಪದ ಕಲಾ ತಂಡದವರಿಂದ ಆಟಿ ಕಳಂಜ ಕಲಾಪ್ರದರ್ಶನ ನಡೆಯಲಿದೆ.

ಮಧ್ಯಾಹ್ನ ವಿಶೇಷ ಭೋಜನ ವ್ಯವಸ್ಥೆ ಆಟಿ ಸಮ್ಮಾನ ನಡೆಯಲಿದೆ. ಅಪರಾಹ್ನ ೨ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ವಹಿಸಲಿದ್ದು, ವಿವಿಧ ಕ್ಷೇತ್ರದ ಸಾಧಕರನ್ನು ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ಸನ್ಮಾನಿಸಲಿದ್ದಾರೆ. ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಬಹುಮಾನ ವಿತರಣೆ ನಡೆಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಕಾರ್ಯಪ್ಪ ಗೌಡ ಪುಂಡಿಗದ್ದೆ ಉಪಸ್ಥಿತರಿರುವರು.

 

ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ

ದಾನಿಗಳಾದ ಕಂಬಳ ಆನಂದ ಗೌಡ, ಸಂಸ್ಕೃತಿ ಸೇವೆಯ ಸಾಧನೆಗಾಗಿ ಪುತ್ಯ ತಿಮ್ನಪ್ಪ ಗೌಡ, ನಾಟಿವೈದ್ಯ ಶಿವರಾಮ ಮುತ್ಲಾಜೆ, ಅರೆಭಾಷೆ ರೇಡಿಯೋ ಜಾಕಿ ತ್ರಿಶೂಲ್ ಕಂಬಳ, ಹೈನುಗಾರಿಕೆ ಸಾಧನೆಗಾಗಿ ಶ್ರೀಮತಿ ಪೂವಮ್ಮ ಪಂಬೆತ್ತಾಡಿಯವರಿಗೆ ಸನ್ಮಾನ ನಡೆಯಲಿದೆ.
ಮಧ್ಯಾಹ್ನ ೩.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ಕದ್‌ರ್ ಕಲಾ ತಂಡದವರಿಂದ ಲೋಕೇಶ್ ಊರುಬೈಲುರವರ ನಿರ್ದೇಶನದ ಅರೆಭಾಷೆ ನಾಟಕ ಎಮ್ಮ ಮನೆ ಅಂಗಳದಿ ಮತ್ತು ಸಾಂಸ್ಕೃತಿಕ ವೈಭವ ನಡೆಯಲಿದೆ.
ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು
ಬೆಳಿಗ್ಗೆ ೯ರಿಂದ ಚಿತ್ರಕಲಾ ಸ್ಪರ್ಧೆ, ಆಟಿ ತಿನಿಸುಗಳ ಸ್ಪರ್ಧೆ, ಚೆನ್ನೆಮಣೆ ಆಟ, ಅರೆಭಾಷೆ ಕಥೆ ಹೇಳುವ ಸ್ಪರ್ಧೆ, ಅರೆಭಾಷೆಯಲ್ಲಿ ಹೆಣ್ಣು ಇಳಿಸಿಕೊಡುವ ಸ್ಪರ್ಧೆ, ಅರೆಭಾಷೆ ವಾಟ್ಸಾಪ್ ಕವನ ಸ್ಪರ್ಧೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಲಗೋರಿ ಪಂದ್ಯಾಟ, ಕಾಯಿ ಕುಟ್ಟುವ ಸ್ಪರ್ಧೆ, ನೀರ್‌ದೋಸೆ ಹೊಯ್ಯುವ ಸ್ಪರ್ಧೆ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.