ತಹಶೀಲ್ದಾರ್ ವರ್ಗಾವಣೆಗೆ ವ್ಯಾಪಕ ಅಸಮಾಧಾನ: ವರ್ಗಾವಣೆ ತಡೆಯಲು ರಾಜ್ಯ ರೈತ ಸಂಘ ಆಗ್ರಹ

Advt_Headding_Middle
Advt_Headding_Middle
Advt_Headding_Middle

ಸಾಮಾಜಿಕ ಜಾಲತಾಣಗಳಲ್ಲೂ ತಹಶೀಲ್ದಾರ್ ಪರ ಟ್ರೆಂಡ್

ಕಳೆದ 6  ತಿಂಗಳಿಂದ ಸುಳ್ಯ ತಹಶೀಲ್ದಾರ್ ಆಗಿದ್ದ ಎನ್.ಎ.ಕುಂಞಿ ಅಹ್ಮದ್ ಅವರಿಗೆ ನಿನ್ನೆಯಷ್ಟೇ ದಿಢೀರ್ ಆಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗವಾಗಿದ್ದು, ಈ ಬೆಳವಣಿಗೆ ಸುಳ್ಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.


ಕೇವಲ 6 ತಿಂಗಳ ಸೇವಾವಧಿಯಲ್ಲಿ ಕುಂಞಿ ಅಹ್ಮದ್ ಜನಪರ ಮತ್ತು ಜನಸ್ನೇಹಿ ಅಧಿಕಾರಿ ಎಂದು ಗುರುತಿಸಲ್ಪಟ್ಟಿದ್ದರು. ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವ ಅವರ ನಡವಳಿಕೆ ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ತಾಲೂಕಿನ ಅನೇಕ ಸಾಮುದಾಯಿಕ ವ್ಯಕ್ತಿಗತ ಸಮಸ್ಯೆಗಳಿಗೆ ಅವರು ಪರಿಹಾರ ಒದಗಿಸಿದ್ದರು. ಸ್ವಚ್ಛ ಸುಳ್ಯಕ್ಕಾಗಿ ಪಣ ತೊಟ್ಟಿದ್ದರು. ಪರಿಣಾಮ ಅಪಾರ ಜನಪ್ರೀತಿ ಗಳಿಸಿಕೊಂಡಿದ್ದರು. ಈಗ ದಿಢೀರನೆ ಅವರ ವರ್ಗಾವಣೆ ಆಗಿರುವುದರಿಂದ ಜನಸಾಮಾನ್ಯರಲ್ಲಿ ಅಸಮಾಧಾನ ಮೂಡಿದೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸುಳ್ಯ ತಾಲೂಕು ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಉತ್ತಮ ಹಾಗೂ ದಕ್ಷ ಅಧಿಕಾರಿಯಾದ ಕುಂಞಿ ಅಹ್ಮದ್ ಅವರ ವರ್ಗಾವಣೆಯನ್ನು ಕೂಡಲೇ ತಡೆ ಹಿಡಿದು ಇಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ.

ದಕ್ಷ ತಹಶೀಲ್ದಾರ್‌ರನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಒಕ್ಕೊರಲಿನಿಂದ ಪ್ರಯತ್ನ ಮಾಡಬೇಕು ಎಂಬ ಸಂದೇಶಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.