Breaking News

ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದಲ್ಲಿ ಶ್ರೀರಾಮ ಸೇನಾ ಪ್ರಾಂತ ಅಭ್ಯಾಸ ವರ್ಗ : ಪ್ರಮೋದ್ ಮುತಾಲಿಕ್ ಭಾಗಿ

Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ಶ್ರೀ ರಾಮ ಸೇನಾ ಸಂಘಟನೆಯ ಪ್ರಾಂತ ಅಭ್ಯಾಸ ವರ್ಗ -2019 ಜು.20 ರಂದು ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಮಠದಲ್ಲಿ ಉದ್ಘಾಟನೆ ಗೊಂಡಿದೆ.


ಅಭ್ಯಾಸ ವರ್ಗ ಕಾರ್ಯಕ್ರಮ ಇವತ್ತು ಮತ್ತು ನಾಳೆ ನಡೆಯಲಿದ್ದು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ಮತ್ತು ಕೆಲವು ತಾಲೂಕುಗಳ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು 150 ಪದಾಧಿಕಾರಿಗಳು ಭಾಗವಹಿಸುತಿದ್ದಾರೆ.
ಅಭ್ಯಾಸ ವರ್ಗವನ್ನು ಸಂಪುಟ ನರಸಿಂಹ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರ ಪೂರ್ವಾಶ್ರಮದ ಮಾತೃಶ್ರೀ ಯವರಾದ ಮಹಾಲಕ್ಷ್ಮಿ ಜೋಯಿಸ್ ದೀಪಬೆಳಗಿಸಿ ಚಾಲನೆ ನೀಡಿದರು.


ಶ್ರೀ ರಾಮ ಸೇನಾ ಸಂಚಾಲಕ ಪ್ರಮೋದ್ ಮುತಾಲಿಕ್ ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡುತ್ತಾ, ರಾಜ್ಯ ಸರಕಾರದ ಈಗಿನ ದೊಂಬರಾಟವನ್ನು ನಾವು ಖಂಡಿಸುತ್ತೇವೆ ಎಂದರು.
ಹಿಂದೂಗಳ ಮೇಲೆ ಆಕ್ರಮಣ ನಡೆಯುತ್ತಿದೆ .‌ ಇದನ್ನು ತಡೆಯುವುದು ಹಾಗೂ ಹಿಂದೂಗಳ ಮಾನಸಿಕತೆಯನ್ನು ಪುನಃ ಜಾಗೃತಿ ಮಾಡುವುದೇ ನಮ್ಮ ಉದ್ದೇಶ ಎಂದರು.
ವೇದಿಕೆಯಲ್ಲಿ ಶ್ರೀ ರಾಮ ಸೇನೆಯ ರಾಜ್ಯ ಅಧ್ಯಕ್ಷ ಸಿದ್ದಲಿಂಗ ಗುರೂಜೀ, ರಾಜ್ಯ ಕಾರ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ , ರಾಜ್ಯ ದುರ್ಗಾ ಸೇನಾ ಅಧ್ಯಕ್ಷೆ ಕವಲಕ್ಕ ಜೇಡಾರ್ , ಶ್ರೀ ರಾಮ ಸೇನೆಯ ಪ್ರಧಾನ ಕಾರ್ಯದರ್ಶಿ ಮಾಲಿಂಗಣ್ಣ ಪರಶುರಾಮ ನಡುಮನಿ ಹಾಗೂ ರಾಜ್ಯ ಸಂಪರ್ಕ ಪ್ರಮುಖರು ಹಾಗು ತಾಲೂಕುಗಳ ಶ್ರೀ ರಾಮ ಸೇನಾ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.