ಬೆಳ್ಳಾರೆ: ಶ್ರೀ ಧನಲಕ್ಷ್ಮೀ ಗೊಂಚಲು ಸಮಿತಿ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಬೆಳ್ಳಾರೆ ಶ್ರೀ ಧನಲಕ್ಷ್ಮೀ ಗೊಂಚಲು ಸಮಿತಿ ಇದರ 2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ಜು. 18 ರಂದು ಅಂಬೇಡ್ಕರ್ ಭವನ ಬೆಳ್ಳಾರೆಯಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ರೈ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ 2018-19 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಸಂಘದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ನೆಟ್ಟಾರು ಸಭೆಯಲ್ಲಿ ಮಂಡಿಸಿದರು. ನಂತರ 2019-20 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಶ್ರೀಮತಿ ರೋಹಿಣಿ, ಕಾರ್ಯದರ್ಶಿ ಕು| ಆಶಾ, ಉಪಾಧ್ಯಕ್ಷರಾಗಿ ಶ್ರೀಮತಿ ನಂದಿನಿ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರೇಮ ಇವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಶ್ರೀಮತಿ ಶೈಲಜಾ ವಲಯ ಮೇಲ್ವಿಚಾರಕರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಶ್ರೀಮತಿ ಚಿತ್ರಕಲಾ ಪ್ರತಿನಿಧಿ, ಬ್ಲಾಕ್ ಸೊಸೈಟಿ ಇವರು ಉಪಸ್ಥಿತರಿದ್ದರು. ಶ್ರೀಮತಿ ಲೋಲಾಕ್ಷಿ ನೆಟ್ಟಾರು ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ನೆಟ್ಟಾರು ವಂದಿಸಿದರು. ಶ್ರೀಮತಿ ಯಶೋದಾ ಕಾರ್ಯಕ್ರಮ ನಿರೂಪಿಸಿದರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.