HomePage_Banner
HomePage_Banner
HomePage_Banner
Breaking News

ಸುಬ್ರಹ್ಮಣ್ಯ – ಮಂಗಳೂರು ಮಧ್ಯೆ ಲೋಕಲ್ ರೈಲು ಓಡಾಟಕ್ಕಾಗಿ ಪ್ರಧಾನಿಗೆ ಮನವಿ


ಮಂಗಳೂರು – ಸುಬ್ರಹ್ಮಣ್ಯ ನಡುವೆ ದಿನಕ್ಕೆ ನಾಲ್ಕು ಬಾರಿ ಲೋಕಲ್ ರೈಲು ಓಡಾಡುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಎಡಮಂಗಲ ಗ್ರಾಮದ ದಡ್ಡು ಕುಶಾಲಪ್ಪ ನಾಯ್ಕರು ದೇಶದ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

ಎಡಮಂಗಲದಲ್ಲಿ ರೈಲು ನಿಲ್ದಾಣ ಒಂದಿದ್ದು, ಈ ರೈಲು ಮಾರ್ಗದಲ್ಲಿ ಬೆಂಗಳೂರು -ಮಂಗಳೂರು ಎಕ್ಸ್‌ಪ್ರೆಸ್ ರೈಲು ಮಾತ್ರ ಸಂಚರಿಸುತ್ತದೆ. ಇದೇ ಮಾರ್ಗದಲ್ಲಿ ಲೋಕಲ್ ರೈಲು ಮಂಗಳೂರು-ಸುಬ್ರಹ್ಮಣ್ಯ ನಡುವೆ ದಿನಕ್ಕೆ ಒಂದು ಬಾರಿ ಮಾತ್ರ ಸಂಚರಿಸುತ್ತದೆ. ಇದರಿಂದಾಗಿ ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಮಂಗಳೂರು- ಸುಬ್ರಹ್ಮಣ್ಯ ನಡುವೆ ಲೋಕಲ್ ರೈಲನ್ನು ಬೆಳಿಗ್ಗೆ ಆರು ಗಂಟೆಗೆ ಸುಬ್ರಹ್ಮಣ್ಯದಿಂದ ಹೊರಟು 9.3೦ ಕ್ಕೆ ಮಂಗಳೂರು ತಲುಪುವಂತೆ, 1೦ ಗಂಟೆಗೆ ಮಂಗಳೂರಿನಿಂದ ಹೊರಟು 12-3೦ ಕ್ಕೆ ಸುಬ್ರಹ್ಮಣ್ಯ ತಲುಪುವಂತೆ, ಮಧ್ಯಾಹ್ನ 1.3೦ ಕ್ಕೆ ಸುಬ್ರಹ್ಮಣ್ಯದಿಂದ ಹೊರಟು ಸಂಜೆ 4 ಗಂಟೆಗೆ ಮಂಗಳೂರು ತಲುಪುವಂತೆ ಹಾಗೂ 6.3೦ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8.3೦ ಕ್ಕೆ ಸುಬ್ರಹ್ಮಣ್ಯ ತಲುಪುವಂತೆ ಓಡಿಸಿದರೆ ಲಕ್ಷಾಂತರ ಭಕ್ತಾದಿಗಳಿಗೆ ವಿದ್ಯಾರ್ಥಿಗಳಿಗೆ ಉದ್ಯೋಗಸ್ಥರಿಗೆ ಅನುಕೂಲವಾಗುತ್ತದೆ ಎಂದು ಕುಶಾಲಪ್ಪ ಪ್ರಧಾನಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.

ಡಮಂಗಲ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಕೂಡ ಅವರು ಪತ್ರದಲ್ಲಿ ಪ್ರಧಾನಿಗಳ ಗಮನ ಸೆಳೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.