ಮರ್ಕಂಜ : ಮ್ಯಾಟ್ ತರಬೇತಿ

Advt_Headding_Middle
Advt_Headding_Middle


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು ವಲಯದ ಮರ್ಕಂಜ ಕಾರ್ಯಕ್ಷೇತ್ರದ ಅಂಗಡಿಮಜಲು ಎಂಬಲ್ಲಿ ಶ್ರೀ ಲಕ್ಷ್ಮಿ ಪಾವನ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಮ್ಯಾಟ್ ತರಬೇತಿಯನ್ನು ಶಾರದಾರವರ ಮನೆಯಲ್ಲಿ ನೀಡಲಾಯಿತು.


ಕೇಂದ್ರದ ಸದಸ್ಯರು ಈ ಪ್ರಯೋಜನವನ್ನು ಪಡಕೊಂಡರು. ಸೌಮ್ಯರವರು ತರಬೇತಿಯನ್ನು ನೀಡಿದರು. ವಲಯದ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಮಾತನಾಡಿ, ಯೋಜನೆಯು ಗ್ರಾಮದಲ್ಲಿ ಸ್ವಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಸಂಘದ ಸದಸ್ಯರು ಸ್ವಉದ್ಯೋಗ ಮಾಡುವುದಾದಲ್ಲಿ ಸಬ್ಸಿಡಿ ಯೋಜನೆ ಸಾಲ 1೦%ಬಡ್ಡಿ ದರದಲ್ಲಿ 3ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದರು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷರಾದ ರೋಹಿಣಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾರತಿ, ಸೇವಾಪ್ರತಿನಿಧಿ ಬಾಲಕೃಷ್ಣ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.