Breaking News

ನಬಾರ್ಡ್ ಸಭೆಗೆ ದ.ಕ. ಜಿಲ್ಲಾ ಜೇನು ಸಹಕಾರ ಸಂಘಕ್ಕೆ ಆಹ್ವಾನ

Advt_Headding_Middle
Advt_Headding_Middle


ಜೇನು ಸಾಕಾಣಿಕೆಯನ್ನು ಇನ್ನಷ್ಟು ಜನಪ್ರಿಯಗೊಳಿಸಿ ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ನಬಾರ್ಡ್ ಸಂಸ್ಥೆಯು ಜುಲೈ 26 ರಂದು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಆಯೋಜಿಸಿರುವ ಜೇನು ವ್ಯವಸಾಯಗಾರರ ಸಭೆಗೆ ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಂಘವನ್ನು ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ಜೇನು ಸಾಕಾಣಿಕೆಯನ್ನು ಪ್ರಮುಖ ವಾಣಿಜ್ಯ ಉದ್ಯಮವಾಗಿ ಬೆಳೆಸಲು ಹಾಗೂ ಹನಿ ಮಿಷನ್ ಮತ್ತು ರಾಷ್ಟ್ರೀಯ ಜೇನು ಮಂಡಳಿ ಕೇಂದ್ರ ಸರಕಾರ ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ನಬಾರ್ಡ್ ತನ್ನ ಪ್ರಾದೇಶಿಕ ಸಲಹಾ ತಂಡದ ಈ ಪ್ರಥಮ ಸಭೆಯನ್ನು ಕರೆದಿದೆ. ಈ ಸಭೆಗೆ ಬಂದಿರುವ ಆಹ್ವಾನದ ಮೇರೆಗೆ ದ.ಕ. ಜಿಲ್ಲಾ ಜೇನು ವ್ಯವಸಾಯಗಾರರ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.