ದುಗಲಡ್ಕ; ಮಿತ್ರ ಯುವಕ ಮಂಡಲ ಮತ್ತು ಕುರಲ್ ತುಳು ಕೂಟದ ಮಹಾಸಭೆ

Advt_Headding_Middle
Advt_Headding_Middle

ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳು ಕೂಟ ದುಗಲಡ್ಕ ಇದರ ವಾರ್ಷಿಕ ಮಹಾಸಭೆಯು ಜು.21ರಂದು ದುಗಲಡ್ಕದ ಯುವಕ ಮಂಡಲದ ಕಟ್ಟಡ ದಲ್ಲಿ ನಡೆಯಿತು.

ದುಗಲಡ್ಕ ಪ್ರೌಢಶಾಲಾ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಮಾಸ್ತರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.
ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ್, ಅಧ್ಯಕ್ಷ ನಾರಾಯಣ ಟೈಲರ್,ಯುವಕ ಮಂಡಲದ ಅಧ್ಯಕ್ಷ ಭವಾನಿಶಂಕರ ಕಲ್ಮಡ್ಕ,ಕಾರ್ಯದರ್ಶಿಗಳಾದ ದಿನೇಶ್ ಕೊಯಿಕುಳಿ,ಶ್ರೀಮತಿ ನವ್ಯ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಗಳ ವಾರ್ಷಿಕ ವರದಿ, ಜಮಾಖರ್ಚು ವರದಿ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಂಘದ ಹಿತೈಷಿಗಳಾದ ಶಿವಪ್ಪ ನಾಯ್ಕ ಕಲ್ಮಡ್ಕ ಕುಟುಂಬಕ್ಕೆ ನೀಡಲಾದ ಧನಸಹಾಯವನ್ನುಅವರ ಪುತ್ರ ಚೇತನ್ ಕಲ್ಮಡ್ಕರವರಿಗೆ ಹಸ್ತಾಂತರ ಮಾಡಲಾಯಿತು.
ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.