Breaking News

ಅರಂಬೂರು ಸೇತುವೆ ಕಾಮಗಾರಿ ಸ್ಥಗಿತ-3 ವರ್ಷದ ಹಿಂದೆ ಆರಂಭಗೊಂಡಿತ್ತು-2018ರ ಜೂನ್ ತಿಂಗಳಲ್ಲಿ ಸಾರ್ವಜನಿಕರಿಗೆ ನೀಡಬೇಕಿತ್ತು

Advt_Headding_Middle
Advt_Headding_Middle

ಸರಿ ಸುಮಾರು 3ವರ್ಷಗಳ ಹಿಂದೆ ಆರಂಭಗೊಂಡ ಅರಂಬೂರು ಸೇತುವೆ ಕಾಮಗಾರಿ ಇದೀಗ ಸ್ಥಗಿತಗೊಂಡಿದೆ. ಸೇತುವೆಯ ಸುಮಾರು ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆಯಷ್ಟೇ. ಈ ಸೇತುವೆಯ ಕಾಮಗಾರಿ ಆಗಿ ಸಾರ್ವಜನಿಕರ ಉಪಯೋಗಕ್ಕೆ ಸಿಗಬೇಕೆಂದು ಈ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.
ಅರಂಬೂರು ಶಾಲೆಯ ಹಿಂಬದಿಯಿಂದಾಗಿ ಆಲೆಟ್ಟಿ ಗ್ರಾಮದ ಮಜಿಗುಂಡಿ, ಕೂಟೇಲು, ಅಂಜಿಕಾರ್. ನೆಡ್ಚಿಲ್, ಪಾಲಡ್ಕಕ್ಕೆ ಹೋಗಲು ತೂಗು ಸೇತುವೆಯನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.
ಆ ಬಳಿಕ ಈ ಭಾಗಕ್ಕೆ ಸೇತುವೆ ಆಗಬೇಕೆಂದು ಜನರ ಒತ್ತಾಯದ ಮೇರೆಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಯಿತು. ಅದರಂತೆ 2015ರಲ್ಲಿ ಸಿದ್ಧರಾಮಯ್ಯರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಿನ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭ ಚಿಲ್ತಡ್ಕರವರ ನೇತೃತ್ವದಲ್ಲಿ ಪ್ರಯತ್ನ ನಡೆದು ಅರಂಬೂರಿನ ಸೇತುವೆ ನಿರ್ಮಾಣಕ್ಕೆ ಅಪೆಂಡಿಕ್ಸ್ ಇ ಯಲ್ಲಿ ಸುಮಾರು 4 ಕೋಟಿ 90ಲಕ್ಷ ರೂ ಅನುದಾನ ಸರಕಾರದಿಂದ
ಬಿಡುಗಡೆಯಾಯಿತು. 2017 ಜನವರಿ 10ರಂದು ಸೇತುವೆಗೆ ಆಗ ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ ರಮಾನಾಥ ರೈಯವರು ಬಂದು ಭೂಮಿ ಪೂಜೆ ನೆರವೇರಿಸಿ ಹೋಗಿದ್ದರು. ಆ ಬಳಿಕ ಸೇತುವೆಯ ಕಾಮಗಾರಿ ಆರಂಭಗೊಂಡಿತ್ತು.
2018 ಜೂನ್ ಕೊನೆಯ ಅವಧಿ
ಅನುದಾನ 2015ರಲ್ಲಿ ಮಂಜೂರಾಗಿದ್ದು ಅದರ ಟೆಂಡರ್ ಪ್ರಕ್ರಿಯೆ ಮುಗಿದು 2017ರಲ್ಲಿ ಕಾಮಗಾರಿಗೆ ಚಾಲನೆ ಕೊಡಲಾಯಿತಾದರೂ ಆ ಬಳಿಕ ಆಮೆಗತಿಯಲ್ಲೇ ಕಾಮಗಾರಿ ನಡೆಯ ತೊಡಗಿತ್ತು. ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಉಡುಪಿಯ ರಾಜೇಶ್ ಕಾರಂತರು2018ರ ಜೂನ್ ತಿಂಗಳಲ್ಲಿ ಕಾಮಗಾರಿ ಮಗಿಸಿಕೊಡಬೇಕಾಗಿತ್ತು. ಆದರೆ ಇದೀಗ 2016ರ ಜೂನ್ ಕಳೆದರೂ ಕಾಮಗಾರಿ ಶೇ.50ರಷ್ಟು ಮಾತ್ರ ಆಗಿದೆ.
ಪಯಸ್ವಿನಿ ನದಿಯಿಂದ ಪಿಲ್ಲರ್‌ಗಳನ್ನು ಹಾಕಿ, ಅದಕ್ಕೆ ಮೇಲೆ ಸ್ಲ್ಯಾಬ್ ಹಾಕಲಾಗಿದೆ. ಅದೂ ಪೂರ್ಣ ಹಾಕಿಲ್ಲ. ಎರಡೂ ಬದಿಯ ರಸ್ತೆಯಿಂದ ಸೇತುವೆಗೆ ಸಂಪರ್ಕ, ಸೇತುವೆಗೆ ಎರಡೂ ಬದಿ ತಡೆ ಗೋಡೆ, ರಿಟೈನಿಂಗ್ ವಾಲ್ ಇತ್ಯಾದಿ ಕೆಲಸಗಳು ಆಗಬೇಕಾಗಿದೆ.
ಮಳೆ ಕಾರಣವೇ…

: ಕಳೆದ ಕೆಲವು ತಿಂಗಳಿನಿಂದ ಸೇತುವೆಯ ಕಾಮಗಾರಿ ಸ್ಥಗಿತ ಗೊಂಡಿದೆ. ಸೇತುವೆಯ ಕಂಟ್ರಾಕ್ಟ್ ವಹಿಸಿಕೊಂಡವರು ಉಡುಪಿಯವರು. ಇಲ್ಲಿ ನೋಡಿಕೊಳ್ಳಲು ರೈಟರ್ ಒಬ್ಬರು ಇದ್ದರು. ಅವರಿಗೆ ಫೋನ್ ಮಾಡಿ ಕೆಲಸ ಮಾಡುವಂತೆ ಹೇಳುತ್ತೇವಾದರೂ ಇವತ್ತು ಬರುತ್ತೇವೆ, ನಾಳೆ ಬರುತ್ತೇವೆ ಎಂದು ಹೇಳುತ್ತಾರೆ ಹೊರತು ಬರುವುದು ಕಾಣುತ್ತಿಲ್ಲ. ಈ ಸೇತುವೆ ಕಾಮಗಾರಿ ಆಗಿ ಜನರಿಗೆ ಬೆಗ ಸಿಗಬೇಕು. ಇಲ್ಲಿಂದ ಆರಿಸಿ ಬಂದ ಜನಪ್ರತಿನಿಧಿಗಳು ಸೇತುವೆ ಕೆಲಸ ಆಗುವಲ್ಲಿ ಕಾಳಜಿ ವಹಿಸಬೇಕು. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಈ ಭಾಗದ ಕೃಷಿಕರಾದ ರತ್ನಾಕರ್ ಹೇಳುತ್ತಾರೆ.
ಜನರಿಗೆ ಸಿಗಲಿ.

“ಇಲ್ಲಿ ಸೇತುವೆ ಆಗಲು ಈ ಭಾಗದ ಹಲವರ ಶ್ರಮ ಇದೆ. ಬಳಿಕ ನಮ್ಮ ಬೇಡಿಕೆಗೆ ಸ್ಪಂದಿಸಿ ಸರಕಾರ ಸೇತುವೆ ಮಂಜೂರು ಮಾಡಿತು. ಆದರೆ ಕಾಮಗಾರಿ ಮಾತ್ರ ಆಮೆ ಗತಿಯಲ್ಲಿ ನಡೆಯುತ್ತಿದೆ. ಈ ಸೇತುವೆಯ ಬಳಿಕ ಆರಂಭಗೊಂಡ ಅರಂತೋಡು ಸೇತುವೆ ಕಾಮಗಾರಿ ಆಗಿದೆ. ಇದು ಯಾಕೆ ಇಷ್ಟು ತಡವಾಗಿದೆ?. ಆದ್ದರಿಂದ ಇದರ ಕೆಲಸ ಆದಷ್ಟು ಬೇಗ ಪೂರ್ಣಗೊಂಡು ಈ ಭಾಗದವರಿಗೆ ಉಪಯೋಗಕ್ಕೆ ಸಿಗುವಂತಾಗಬೇಕು“ ಎಂದು ಕೃಷಿಕರಾದ,, ಸೇತುವೆಯ ಫಲಾನುಭವಿ ದಿವಾಕರ ಪೈಯವರು ಹೇಳುತ್ತಾರೆ
……….
ನೋಟೀಸ್ ನೀಡಿವೆ
“2018ರಲ್ಲೇ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಅವರು ನಿಧಾನವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಅವರಿಗೆ ಆಗಾಗ ನೋಟೀಸ್ ಮಾಡುತ್ತಿzವೆ. ಫೋನ್‌ನಲ್ಲಿಯೂ ಸಂಪರ್ಕಿಸುತ್ತಿzವೆ. ಈಗಾಗಲೇ ಶೇ.50ಕ್ಕೂ ಹೆಚ್ಚು ಕೆಲಸ ಆಗಿದೆ. ಇನ್ನೂ ಆಗಬೇಕಿದೆ. ಸರಿಯಾಗಿ ಕೆಲಸ ಮಾಡಿದರೆ ಮುಂದಿನ ಮಾರ್ಚ್‌ಗೆ ಜನರ ಉಪಯೋಗಕ್ಕೆ ನೀಡಬಹುದು. ಆದರೆ ಈಗ ಗುತ್ತಿಗೆದಾರರು ಮಳೆಯ ಕಾರಣ ನೀಡುತ್ತಿದ್ದಾರೆ“ ಎಂದು ಸುಳ್ಯ ಲೋಕೋಪಯೋಗಿ ಇಲಾಖೆಯ ಎ.ಇ.ಇ. ಸಣ್ಣೇಗೌಡರು ಹೇಳಿದ್ದಾರೆ.
……………
ಪೆರಾಜೆಗೂ ಸಂಪರ್ಕ… ಆಲೆಟ್ಟಿಗೂ ಸಂಪರ್ಕ
ಈಗ ಆಗುತ್ತಿರುವ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಪೆರಾಜೆ ಹಾಗೂ ಆಲೆಟ್ಟಿಗೆ ಬಹಳ ಹತ್ತಿರದ ರಸ್ತೆ ಸಿಗುತ್ತದೆ. ಆಲೆಟ್ಟಿ ಗ್ರಾಮದ ಅರಂಬೂರು, ಮಜಿಗುಂಡಿ, ಕೋಟೇಲು, ನೆಡ್ಚಿಲ್, ಪಾಲಡ್ಕದ ಜನರಿಗೆ ಬಹಳ ಉಪಯೋಗವಾಗುವುದರೊಂದಿಗೆ ಪರಾಜೆ ಗ್ರಾಮಕ್ಕೂ ಹಾಗೂ ಆಲೆಟ್ಟಿ ಗ್ರಾಮ ಕೇಂದ್ರಕ್ಕೆ ಬಂದು ಕೇರಳಕ್ಕೆ ಹೋಗಲೂ ಈ ಸೇತುವೆ ಪ್ರಯೋಜನವಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.