ಬೊಮ್ಮಾರು : ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ ವತಿಯಿಂದ “ಮರಾಠಿ ಸಂವಾದ” ಕಾರ್ಯಕ್ರಮ

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ವತಿಯಿಂದ “ಮರಾಠಿ ಸಂವಾದ” ಕಾರ್ಯಕ್ರಮವು ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಮೂವರ್ ದೈವಸ್ಥಾನದ ಸಭಾಭವನ ಬೊಮ್ಮಾರಿನಲ್ಲಿ ಜು.೨೧ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿಯ ಅಧ್ಯಕ್ಷ ಅಶೋಕ ನಾಯ್ಕ ಕೆದಿಲ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ, ದಯಾಕರ ಪಾಲ್ತಾಡಿ, ಸರಸ್ವತಿ ಮುಂಡೋಡಿ, ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಶ್ರೀಧರ ತಳೂರು, ಸುಳ್ಯ ತಾಲೂಕು ಅಧ್ಯಕ್ಷ ಯಶವಂತ ಮಂಡೆಕೋಲು, ಕಾರ್ಯದರ್ಶಿ ದೇವಕಿ ಎಲಿಮಲೆ, ನಾಟಿವೈದ್ಯೆ ದಮಯಂತಿ ಪುತ್ತೂರು ಉಪಸ್ಥಿತರಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಬೊಮ್ಮಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ನಾಯಕ್ ಬೊಮ್ಮಾರು ವಂದಿಸಿದರು. ಧನ್ಯ ಮತ್ತು ದಿವ್ಯ ಪ್ರಾರ್ಥಿಸಿದರು. (ವರದಿ : ದಯಾನಂದ ಕೊರತ್ತೋಡಿ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.