ವಿಶ್ವಾಸ ಮತ ಪಡೆಯಲು ಕುಮಾರಸ್ವಾಮಿ ಸರಕಾರ ವಿಫಲ: ಕೆಲವೇ ಕ್ಷಣದಲ್ಲಿ ರಾಜೀನಾಮೆ

Advt_Headding_Middle
Advt_Headding_Middle

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಮಂಡಿಸಿದ್ದ ವಿಶ್ವಾಸಮತ ನಿರ್ಣಯವು ಬಿದ್ದುಹೋಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ.


ಕಾಂಗ್ರೆಸ್ ಮತ್ತು ಜೆಡಿಎಸ್ ನ ಹದಿನೈದು ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರಿಂದ ಸರಕಾರಕ್ಕೆ ಅಸ್ಥಿರತೆ ಕಾಡಿತ್ತು. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿಯವರು ಸ್ವಯಂ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದರು. ಜುಲೈ 18 ರಂದು ಇದರ ಬಗ್ಗೆ ಅವರು ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದ್ದರು.

ಆ ಪ್ರಸ್ತಾವನೆಯ ಕುರಿತಾಗಿ ಜು. 18, 19, 22 & ಇಂದು ಸುದೀರ್ಘ ಚರ್ಚೆ ನಡೆದು, ರಾತ್ರಿ 7.20 ಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಆ ಸಂದರ್ಭ ಕುಮಾರಸ್ವಾಮಿ ಅವರ ಪರವಾಗಿ 99 ಮತಗಳು ಪ್ರಸ್ತಾವನೆಗೆ ವಿರುದ್ಧವಾಗಿ 105 ಮತಗಳು ಲಭಿಸಿದವು. ಪರಿಣಾಮವಾಗಿ ಸರಕಾರ ಬಿದ್ದು ಹೋದಂತಾಗಿದ್ದು, ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.